ಶಿಕ್ಷಣ ಸಚಿವರಿಂದ ನಾಡಿನ ಶಿಕ್ಷಕರಿಗೆ ಬಂತು ಸಿಹಿ ಸುದ್ದಿ ಸೇವಾವಧಿಯಲ್ಲಿ ಒಂದು ಬಾರಿ ವರ್ಗಾವಣೆಗೆ ಸೂಕ್ತ ಕ್ರಮಕ್ಕೆ ಸೂಚನೆ…..

Suddi Sante Desk

ಬೆಂಗಳೂರು –

ಒಂದು ಕಡೆ ದಿನದಿಂದ ದಿನಕ್ಕೆ ಕಂಗಟ್ಟಾಗುತ್ತಿದೆ ಶಿಕ್ಷಕರ ವರ್ಗಾವಣೆ ಮತ್ತೊಂದು ಕಡೆಗೆ ಬೆಂಗಳೂರು ಚಲೋ ಗೆ ಸಿದ್ದತೆ ನಡೆಸಿದ್ದಾರೆ ನಾಡಿನ ಶಿಕ್ಷಕರು.ಇವೆರಡರ ನಡುವೆ ಸೇವಾವಧಿಯಲ್ಲಿ ಒಮ್ಮೆಯಾದರೂ ಶಿಕ್ಷಕರಿಗೆ ಕೇಳಿದ್ದಲ್ಲಿ ವರ್ಗಾವಣೆ ಗೆ ಅವಕಾಶ ಮಾಡಿಕೊಡುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದರು.

ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸಂಘದ ಸರ್ವ ಸದಸ್ಯರ ಧ್ವನಿಯಾಗಿ ಮಾಡಿದ ಮನವಿಗೆ ಸ್ಪಂದಿಸಿ ಈ ಕುರಿತಂತೆ ಸ್ಬಂದಿಸಿದ್ದಾರೆ.

ಈ ಕೂಡಲೇ ಸಂಘದ ಸದಸ್ಯರು ಕೇಳಿದ ವಿಚಾರ ಕುರಿತಂತೆ ಈ ಕೂಡಲೇ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

ಹೀಗಾಗಿ ಎಲ್ಲೊ ವರ್ಗಾವಣೆ ಸಿಗದೇ ಬೇಸರಗೊಂ ಡಿದ್ದ ನಾಡಿನ ಶಿಕ್ಷಕರು ಶಿಕ್ಷಣ ಸಚಿವರ ಭರವಸೆ ಯಿಂದಾಗಿ ಸಂತೋಷಗೊಂಡಿದ್ದು ಇವರ ಈ ಒಂದು ಸಂದೇಶದಿಂದಾದರೂ ಸೇವಾವಧಿಯಲ್ಲಿ ಒಮ್ಮೆ ಯಾದರೂ ವರ್ಗಾವಣೆಗೆ ಸಿಗುತ್ತದೆನಾ ಎಂಬ ಆಶಾಭಾವನ್ನು ಇಟ್ಟುಕೊಂಡಿದ್ದು ಇನ್ನೂ ಇತ್ತ ಸಂಘದ ಅದರಲ್ಲೂ ನಾಡಿನ ಶಿಕ್ಷಕರ ಧ್ವನಿಯಾಗಿ ಪತ್ರ ಬರೆದಿರುವ ಈ ಒಂದು ಸಂಘದ ಕಾರ್ಯಕ್ಕೆ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದು ಶೀಘ್ರವೇ ಈ ಒಂದು ಕಾರ್ಯವಾಗಲಿ ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.