ಯಾದಗಿರಿ –
ಹೌದು ಯಾದಗಿರಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರೆ ಆಧಾರವಾಗಿದ್ದಾರೆ. ಜಿಲ್ಲೆ ಯಲ್ಲಿ ಅತಿ ಹೆಚ್ಚು ಸುರಪುರ ತಾಲ್ಲೂಕಿನಲ್ಲಿ ವರ್ಗಾವಣೆ ಯಾಗಿದ್ದು ಅಲ್ಲಿ ಹೆಚ್ಚು ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಕ ಮಾಡಿದೆ.ಜಿಲ್ಲೆಯಲ್ಲಿ 925 ಪ್ರಾಥಮಿಕ ಶಾಲೆಗಳು, 122 ಸರ್ಕಾರಿ ಪ್ರೌಢಶಾಲೆಗಳಿವೆ.ಇವುಗಳಲ್ಲಿ ಮಂಜೂ ರಾತಿ ಅರ್ಧದಷ್ಟು ಹುದ್ದೆಗಳು ಖಾಲಿಯಿವೆ.ಹೀಗಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡೊದು ಅನಿವಾರ್ಯವಾಗಿದೆ.
ಅತಿಥಿ ಶಿಕ್ಷಕರ ಹುದ್ದೆಗಳು ಕಾಯಂ ಶಿಕ್ಷಕರು ನೇಮಕವಾಗು ವವರೆಗೆ ಮಾತ್ರ ಅನ್ವಯಸಲಾಗುತ್ತಿದೆ.ಇದರಿಂದ ಕೆಲ ಕಡೆ ಖಾಲಿ ಶಾಲೆಗಳ ಅಭ್ಯರ್ಥಿಗಳು ಮುಖ ಮಾಡಿದ್ದಾರೆ. ಹಿಂದಿನ ಕೆಲ ವರ್ಷಗಳಲ್ಲಿ ಅತಿಥಿ ಶಿಕ್ಷಕರನ್ನು ಆಗಸ್ಟ್‌ನಲ್ಲಿ ನೇಮಿಸಿಕೊಳ್ಳಲಾಗುತ್ತಿತ್ತು.ಕಳೆದ ವರ್ಷದಿಂದ ಶಾಲೆ ಆರಂಭವಾದಾಗಿನಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕ ರನ್ನು ನೇಮಿಸಿಕೊಳ್ಳುವ ಮೂಲಕ ಅವರ ಮೇಲೆ ಅವಲಂ ಬಿತವಾಗಿದೆ.ಮಂಜೂರು ಹುದ್ದೆಗಳು ಭರ್ತಿಯಾಗದ ಕಾರಣ ಖಾಲಿ ಹುದ್ದೆಗಳು ಇರುವುದರಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಹೇಗೆ ಸರಿದೂಗಿಸಲಾಗುತ್ತಿದೆ.
ಪ್ರೌಢಶಾಲೆಗಳಿಗಿಂತ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಹುದ್ದೆಗಳು ಹೆಚ್ಚಿವೆ.ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 5,571 ಮಂಜೂರು ಹುದ್ದೆಗಳಿದ್ದರೆ,3,187 ಭರ್ತಿ ಮಾಡಿ ಕೊಳ್ಳಲಾಗಿದೆ. 2,384 ಹುದ್ದೆಗಳು ಖಾಲಿ ಇವೆ.
ಶಹಾಪುರ ತಾಲ್ಲೂಕಿನಲ್ಲಿ 1,753 ಮಂಜೂರು ಹುದ್ದೆಗ ಳಿದ್ದರೆ,951 ಭರ್ತಿ ಮಾಡಿಕೊಳ್ಳಲಾಗಿದೆ.802 ಖಾಲಿ ಹುದ್ದೆಗಳಿವೆ.ಸುರಪುರ ತಾಲ್ಲೂಕಿನಲ್ಲಿ 2,054 ಹುದ್ದೆಗಳು ಮಂಜೂರಾಗಿದ್ದರೆ 1,087 ಭರ್ತಿಯಾಗಿವೆ. 967 ಖಾಲಿ ಯಿವೆ.ಯಾದಗಿರಿ ತಾಲ್ಲೂಕಿನಲ್ಲಿ 1,764 ಮಂಜೂರಾ ಗಿದ್ದರೆ 1,149 ಭರ್ತಿಯಾಗಿದ್ದು, 615 ಖಾಲಿಯಿವೆ.
ಇನ್ನೂ ಪ್ರೌಢಶಾಲೆಗಳಲ್ಲಿ ಸ್ಪಲ್ಪಮಟ್ಟಿಗೆ ಹುದ್ದೆಗಳು ಭರ್ತಿ ಇದ್ದು, ಖಾಲಿ ಸಂಖ್ಯೆ ಕಡಿಮೆ ಇದೆ.122 ಪ್ರೌಢಶಾಲೆಗಳಲ್ಲಿ 863 ಹುದ್ದೆಗಳು ಮಂಜೂರಾಗಿವೆ.670 ಭರ್ತಿಯಾಗಿದ್ದು 193 ಖಾಲಿ ಇವೆ.
ಶಹಾಪುರ ತಾಲ್ಲೂಕಿನಲ್ಲಿ 264 ಹುದ್ದೆಗಳು ಮಂಜೂರಾ ಗಿದ್ದು 210 ಭರ್ತಿಯಾಗಿವೆ.54 ಖಾಲಿ ಇವೆ.ಸುರಪುರ ತಾಲ್ಲೂಕಿನಲ್ಲಿ 321 ಮಂಜೂರು ಹುದ್ದೆಗಳಿದ್ದರೆ,239 ಭರ್ತಿಯಾಗಿದ್ದು, 82 ಖಾಲಿ ಇವೆ. ಯಾದಗಿರಿ ತಾಲ್ಲೂಕಿ ನಲ್ಲಿ 278 ಮಂಜೂರಾಗಿದ್ದು, 221 ಭರ್ತಿಯಾಗಿ 57 ಖಾಲಿ ಹುದ್ದೆಗಳಿವೆ.
ಕಳೆದ ಶೈಕ್ಷಣಿಕ ವರ್ಷದಲ್ಲಿದ್ದ ಸುಮಾರು 60 ರಿಂದ 70 ಶಿಕ್ಷಕರು ವರ್ಗಾವಣೆಯಾಗಿದ್ದು ಶಿಕ್ಷಣದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ತಾತ್ಕಾಲಿಕವಾಗಿ ಅತಿಥಿ ಶಿಕ್ಷಕ ರನ್ನು ನೇಮಕ ಮಾಡಿಕೊಂಡರೂ ಅವರಿಗೆ ವೇತನ ಕಡಿಮೆ ಇರುವುದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ.
ಪ್ರೌಢಶಾಲೆ ವಿಷಯವಾರು ಶಿಕ್ಷಕರು: ಶಹಾಪುರ ತಾಲ್ಲೂಕಿನಲ್ಲಿ ಕನ್ನಡ 6, ಇಂಗ್ಲಿಷ್ 20, ಹಿಂದಿ 8, ಕಲೆ ಕನ್ನಡ 1, ವಿಜ್ಞಾನ 8, ಉರ್ದು 1 ಸೇರಿದಂತೆ 44 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ.
ಸುರಪುರ ತಾಲ್ಲೂಕಿನಲ್ಲಿ ಕನ್ನಡ 6, ಇಂಗ್ಲಿಷ್ 18, ಹಿಂದಿ 14, ಗಣಿತ 3, ಆರ್ಟ್ ಕನ್ನಡ 2, ವಿಜ್ಞಾನ 16, ಸಿಬಿಜೆಡ್ 1, ಉರ್ದು 1, ಯಾದಗಿರಿ ತಾಲ್ಲೂಕಿನಲ್ಲಿ ಕನ್ನಡ 6, ಇಂಗ್ಲಿಷ್ 15, ಉರ್ದು 2, ಹಿಂದಿ 9, ಗಣಿತ 2, ವಿಜ್ಞಾನ 9, ಸಿಬಿಜೆಡ್ ಉರ್ದು 1 ಸೇರಿದಂತೆ 45 ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ.
‘ಕನ್ನಡ, ಹಿಂದಿ, ಸಮಾಜ ವಿಷಯಗಳಿಗೆ ಅತಿಥಿ ಶಿಕ್ಷಕರು ಅರ್ಜಿ ಸಲ್ಲಿಸುತ್ತಾರೆ. ಆದರೆ, ಇಂಗ್ಲಿಷ್, ಗಣಿತ, ವಿಜ್ಞಾನ ಶಿಕ್ಷಕರು ಸಿಗುವುದು ಕಡಿಮೆ ಇದೆ. ಇದರಿಂದ ಅತಿಥಿ ಶಿಕ್ಷಕರ ಹುದ್ದೆಗಳು ಖಾಲಿ ಇರುತ್ತವೆ. ಇದರಿಂದ ವಿದ್ಯಾರ್ಥಿ ಗಳ ಪಾಠ ಬೋಧನೆಗೆ ಹಿನ್ನಡೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
‘ಈ ಭಾಗದಲ್ಲಿ ಇಂಗ್ಲಿಷ್,ಗಣಿತ,ವಿಜ್ಞಾನ ಶಿಕ್ಷಕರು ಇರು ವುದು ಕಡಿಮೆ. ಅರ್ಜಿ ಕರೆದರೂ ಸಲ್ಲಿಕೆಯಾಗುತ್ತಿಲ್ಲ. ಇದರಿಂದ ಹುದ್ದೆಗಳು ಖಾಲಿ ಇರುವುದು ಸಾಮಾನ್ಯ ಎನ್ನುತ್ತಾರೆ ಡಿಡಿಪಿಐ ಶಾಂತಗೌಡ ಪಾಟೀಲ.