ಮಕ್ಕಳಿಗೆ ಹೋಮ್ ವರ್ಕ್ ಭಾರ ಇಳಿಸಲು ಮುಂದಾದ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಸಿದ್ದತೆ…..

Suddi Sante Desk

ಬೆಂಗಳೂರು –

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ಅನ್ನು ಹಗುರಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.3ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಹೋಂ ವರ್ಕ್ ಅನ್ನು ಸರ್ಕಾರ ಅನುಮತಿಸುವುದಿಲ್ಲ ಆದರೆ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ಹಗುರಗೊಳಿಸಬೇಕೆಂಬುದು ಇಲಾಖೆಯ ಅಭಿಪ್ರಾಯ ವಾಗಿದೆ.

ದಿನದ ಅರ್ಧ ಭಾಗವನ್ನು ಶಾಲೆಯಲ್ಲೇ ಕಳೆಯುವ ಮಕ್ಕಳು ಉಳಿದ ಅಲ್ಪಸ್ವಲ್ಪ ಸಮಯದಲ್ಲಿ ಪಠ್ಯೇತರ ಚಟುವಟಿಕೆ ಮಾಡಲು ಆಗುವುದಿಲ್ಲ ಹಾಗೂ ಮನೆಯವರ ಜೊತೆ ಸಮಯ ಕಳೆಳೆಯುವುದಕ್ಕೂ ಆಗುತ್ತಿಲ್ಲ ಹೀಗಾಗಿ ಹೋಂ ವರ್ಕ್ ರದ್ದುಗೊಳಿಸಬೇಕೆಂದು ಹಲವು ಪೋಷ ಕರು ಒತ್ತಾಯಿಸಿದ್ದಾರೆ.ಅದರಲ್ಲೂ ಖಾಸಗಿ ಶಾಲೆಯವರು ನೀಡುವ ಈ ಒತ್ತಡವನ್ನು ನಮಗೆ ತಡೆದುಕೊಳ್ಳಲು ಆಗು ವುದಿಲ್ಲ ಇನ್ನೂ ಮಕ್ಕಳು ಹೇಗೆ ತಡೆದುಕೊಳ್ಳಬೇಕು ಎಂದು ಮಕ್ಕಳ ಪಾಲಕರು ದೂರಿದ್ದಾರೆ.ಶಾಲೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಬೆಟ್ಟದಷ್ಟು ಹೋಂ ವರ್ಕ್ ನೀಡುತ್ತಾರೆ. ಅರ್ಧ ದಿನವನ್ನು ಶಾಲೆಯಲ್ಲಿ ಕಳೆಯುವ ಮಕ್ಕಳು, ಮನೆಗೆ ಬಂದ ಕೂಡಲೇ ಶಾಲೆಯಲ್ಲಿ ಶಿಕ್ಷಕರು ನೀಡಿದ ರಾಶಿ ರಾಶಿ ಹೋಂ ವರ್ಕ್ ಮಾಡಬೇಕಾಗುತ್ತದೆ.

ಪೋಷಕರು ಕೂಡ ಮಕ್ಕಳಿಗೆ ನೈತಿಕ ಶಿಕ್ಷಣ ಹೇಳಿಕೊಡುವ ಬದಲು ಮಕ್ಕಳ ಜೊತೆ ಕೂತು ಹೋಂ ವರ್ಕ್ ಮಾಡಿಕೊ ಡುವ ಪರಿಸ್ಥಿತಿ ಎದುರಾಗಿದೆ.ಹೀಗಾಗಿ ಆದಷ್ಟು ಬೇಗ ರಾಜ್ಯ ಸರ್ಕಾರ ಹೋಂ ವರ್ಕ್ ರದ್ದುಗೊಳಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.ಇದಕ್ಕೆ ಮಕ್ಕಳ ತಜ್ಞರು ಕೂಡ ಬೆಂಬಲ ಸೂಚಿಸಿದ್ದಾರೆ.ಸರ್ಕಾರ ಕೂಡ ಇದರ ಬಗ್ಗೆ ಚಿಂತನೆ ನಡೆಸಿದ್ದು ಮಕ್ಕಳ ಮನಸ್ಥಿತಿಗೆ ತಕ್ಕ ಹಾಗೆ ಏನು ಮಾಡಬೇಕು ಎಂಬುದರ ಕುರಿತು ಚಿಂತನೆ ನಡೆಸಿದೆ. ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳುತ್ತೇವೆ ಎಂಬ ಆಶಯವನ್ನು ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.ಈಗಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ನಲಿ-ಕಲಿ ರೀತಿಯ ಶಿಕ್ಷಣವನ್ನು ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.ಈ ಪ್ರಸಕ್ತ ವರ್ಷದಿಂ ದಲೇ ಖಾಸಗಿ ಶಾಲೆಯಲ್ಲಿ ನಲಿ-ಕಲಿ ಪದ್ಧತಿಯನ್ನು ಜಾರಿ ಮಾಡಲು ನಿರ್ಧರಿಸಿದೆ.

ಇನ್ನೂ ಖಾಸಗಿ ಶಾಲೆಯಲ್ಲಿ ಕೂಡಾ ಹೋಂ ವರ್ಕ್ ನಿಷೇಧಿ ಸಬೇಕು ಎನ್ನುವುದರ ಬಗ್ಗೆ ಶಿಕ್ಷಣ ಇಲಾಖೆ ಒಲವು ತೋರಿದೆ ಎನ್ನಲಾಗಿದೆ.ಎನ್‍ಇಪಿಯಲ್ಲಿ ಸ್ಪಷ್ಟವಾಗಿ ಎರಡನೇ ತರಗತಿ ಮಕ್ಕಳಿಗೆ ಹೋಂವರ್ಕ್ ನೀಡುವಂತಿಲ್ಲ ಎಂದು ಹೇಳಿದೆ.ಈಗಾಗಾಲೇ ರಾಜ್ಯದ ಸರ್ಕಾರಿ ಶಾಲೆ ಯಲ್ಲೂ ನಲಿ-ಕಲಿ ಪದ್ದತಿ ಜಾರಿಯಲ್ಲಿದೆ.ಇದನ್ನೂ ಖಾಸಗಿ ಶಾಲೆಗೂ ವಿಸ್ತರಿಸಿ ಹೋಂ ವರ್ಕ್ ಸ್ಥಗಿತಗೊಳಿಸುವ ಎನ್‍ಇಪಿಯಲ್ಲಿ ಸ್ಪಷ್ಟವಾಗಿ ಎರಡನೇ ತರಗತಿ ಮಕ್ಕಳಿಗೆ ಹೋಂವರ್ಕ್ ನೀಡುವಂತಿಲ್ಲ ಎಂದು ಹೇಳಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಂವರ್ಕ್ ನೀಡುವಂತಿಲ್ಲ.ಇದು ಖಾಸಗಿ ಶಾಲೆಗಳಿಗೂ ಅನ್ವಯವಾಗಬೇಕಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.ಈ ಕುರಿತು ಚಿಂತನೆ ನಡೆದಿದೆ.ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಕ್ಕಳಿಗೆ ಹೋಂವರ್ಕ್ ರದ್ದುಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.