ಸರ್ಕಾರಿ ಶಾಲೆಯ ಮಕ್ಕಳಿಗೆ ದತ್ತಿ ನೀಡಿದ ಶಿಕ್ಷಣ ಪ್ರೇಮಿಗಳು – ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಸರ್ಕಾರಿ ಶಾಲೆ…..

Suddi Sante Desk
ಸರ್ಕಾರಿ ಶಾಲೆಯ ಮಕ್ಕಳಿಗೆ ದತ್ತಿ ನೀಡಿದ ಶಿಕ್ಷಣ ಪ್ರೇಮಿಗಳು – ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಸರ್ಕಾರಿ ಶಾಲೆ…..

ಗದಗ

ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಗೆ  ಗದಗ ಜಿಲ್ಲೆಯ ಮುಂಡರಗಿ ತಾಲೂಕ ಕೆಲೂರು ಗ್ರಾಮದಲ್ಲಿ 2 ಲಕ್ಷ ರೂಪಾಯಿ ಗಳನ್ನು ದತ್ತಿ ಇಡಲಾಗಿದೆ ಹೌದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿಯಿಂದ ನಿವೃತ್ತರಾದ ಬಡ್ತಿ ಮುಖ್ಯಗುರುಗಳು ಎಫ್.ಎಮ್. ಮಾನಶೇಟ್ಟರ್, ಸಿ.ಆರ್.ಪಿ. ಬಿ.ಆರ್.ಪಿ ಗಳಾಗಿ ನಿವೃತ್ತರಾದ ಬಿ.ಹೆಚ್.ಸೂಡಿ, ಹಾಗೂ ಕೆಲೂರ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹದಾಯ ಕವಾಗಿ ₹-2 ಲಕ್ಷ ರೂಪಯಿಗಳನ್ನು ಶಾಲೆಗೆ ದತ್ತಿ ನೀಡಿದ  ರವಿ.ಡಿ.ಚೆನ್ನಣ್ಣವರ ಅವರ ಪರವಾಗಿ

ಅವರ ದೊಡ್ಡಮ್ಮ ಶ್ರೀಮತಿ ರೇಣುಕಾ ಚೆನ್ನಣ್ಣವರ ಹಾಗೂ ಗ್ರಾಮದ ಉತ್ಸಾಹಿ ಯುವ ಶಿಕ್ಷಣ ಪ್ರೇಮಿ  ಬಸನಗೌಡ ಅವರಿಗೂ ಶಾಲೆಯ ಪರವಾಗಿ ಗೌರವ ಸನ್ಮಾನ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಾಲೆ ಪ್ರಭಾರಿ ಮುಖ್ಯಗುರುಗಳಾದ  ಈರಪ್ಪ ಸೊರಟೂರ ವಹಿಸಿದ್ದರು

ಎಸ್.ಡಿ.ಎಮ್.ಸಿ ಅಧ್ಯಕ್ಷರಾದ  ದೇವಪ್ಪ ಕಲಿವಾಲ ಸದಸ್ಯರಾದ ಬಸವಣ್ಣೆಪ್ಪ ಕೊಂಚಿಗೇರಿ, ಗ್ರಾಮದ ಪ್ರಮುಖರು ಶಿಕ್ಷಣಪ್ರೇಮಿ ಶ್ರೀಮಳ್ಳಪ್ಪ ಬೂದಿಹಾಳ , ಸಿ.ಆರ್.ಪಿ ಗಳಾದ ಎಮ್.ಹೆಚ್.ಬಿಚ್ಛಗತ್ತಿ,

ಶ್ರೀಮುರಗಯ್ಯ ಮರಡೂರ ಮಠ, ಘಟನ ಉಪಸ್ಥಿತಿ ವಹಿಸಿದ್ದರು, ಕಾರ್ಯಕ್ರಮದಲ್ಲಿ ವಿವಿಧ ಶಾಲೆ ಮುಖ್ಯಗುರುಗಳಾದ  ಪಾಟೀಲ, ಶ್ರೀವಿನಾಯಕ ಹೊಸಮನಿ, ಶ್ರೀಮಲ್ಲಿಕಾರ್ಜುನ ಕಲಾಲ ಹಾಗೂ ಶಿಕ್ಷಕರಾದ ನಾಗರಾಜ ಹಳ್ಳಿ, ಗವಿಸಿದ್ದ ರಾಜೂರ, ವೀರಭದ್ರ ದಿಬ್ಬದಮನಿ

,ಮಂಜುನಾಥ, ಪ್ರಶಿಕ್ಷಣಾರ್ಥಿ ಕು.ಪಲ್ಲವಿ ತಿಮ್ಮಾಪೂರ ಸೇರಿದಂತೆ ಗ್ರಾಮದ ಹಿರಿಯರು ಎಸ್.ಡಿ.ಎಮ್ ಸಿ ಸದಸ್ಯರು ಸೇರಿ ಹಲವರು ಭಾಗವಹಿಸಿದ್ದರು, ಶಿಕ್ಷಕಿಯರಾದ ಕು.ಸುಧಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು ,ಶಿಕ್ಷಕಿಯರಾದ ಶ್ರೀಮತಿ ಯಶೋದಾ ಡಂಬ್ರಳ್ಳಿ ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಗದಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.