ಬೆಂಗಳೂರು –
ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ಸಿಆರ್ ಪಿ/ಬಿ ಆರ್ ಪಿ ಮತ್ತು ಇಸಿಒ ಹುದ್ದೆಗಳಿಗೆ ಶೇ.50ರ ಅಂಕಗಳ ನಿಯಮಗಳನ್ನು ಸಡಿಲಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿ ಆದೇಶಿಸಿದೆ.ರಾಜ್ಯದಲ್ಲಿ ವಯೋಮಾನದ ಸಾರ್ವತ್ರಿಕ ದಾಖಲಾತಿ ಹಾಜರಾತಿಯನ್ನು ಸಾಧಿಸುವುದ ಲ್ಲದೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಉತ್ತಮಪಡಿಸುವಲ್ಲಿ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಹಾಗೂ ಮಾರ್ಗದರ್ಶನ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಈಗಾ ಗಲೇ ಕೈಗೊಂಡಿರುವ ಕೌನ್ಸಿಲಿಂಗ್ ಪ್ರಕ್ರಿಯೆ ನಂತರದಲ್ಲಿ ಖಾಲಿ ಉಳಿದಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ಹುದ್ದೆಗಳನ್ನು ನೇಮಕಾತಿ ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿದೆ.

ಸದರಿ ಪರೀಕ್ಷೆಯಲ್ಲಿ ಪತ್ರಿಕೆ-1 ಹಾಗೂ ಪತ್ರಿಕೆ-2 ರಲ್ಲಿ ಪ್ರತ್ಯೇಕವಾಗಿ ಶೇ.50ರಷ್ಟು ಅಂಕಗಳನ್ನು ಪಡೆಯದ ಅಭ್ಯರ್ಥಿಗಳಿಗೆ ಶೇ.50ರ ಅಂಕಗಳ ಮಿತಿಯನ್ನು ಸಡಿಲಿಸಿ ಮೆರಿಟ್ ಆಧಾರದ ಮೇಲೆ ಹುದ್ದೆಗಳ ನೇಮಕಾತಿ ನಡೆ ಸಲು ಅನುಮತಿ ನೀಡುವಂತೆ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ದ್ದರು.ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೇಮಕಾತಿ ನಡೆ ಸಲು ಅನುಮತಿ ನೀಡಿದೆ.