ಚಾಮರಾಜನಗರ –
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪ್ರಾರಂಭ ವಾಗಿದ್ದು ಈ ಒಂದು ಹಿನ್ನಲೆಯಲ್ಲಿ ಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ವಿದ್ಯಾ ರ್ಥಿಗಳು ಹಾಗೂ ಶಿಕ್ಷಕರು ಎತ್ತಿನಗಾಡಿಯಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ.ಮಾಡ್ರಳ್ಳಿ ಸರ್ಕಾರಿ ಶಾಲೆಯ ಆವರ ಣದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು ಶಿಕ್ಷಕರು ಒಟ್ಟಾಗಿ ನಿಂತು ಶಾಲೆಗೆ ಆಗಮಿಸಿದ ವಿದ್ಯಾರ್ಥಿ ಗಳಿಗೆ ಹೂವು,ಪೆನ್ನು,ಪುಸ್ತಕ ಹಾಗೂ ಸಿಹಿಯನ್ನು ನೀಡಿ ಸ್ವಾಗತಿಸಲಾಯಿತು.

ಬೇಸಿಗೆ ರಜೆ ಮುಗಿದ ಬಳಿಕ ಮೊದಲ ದಿನವೇ ಸಾಕಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದು ಉತ್ಸಾಹದಿಂದಲೇ ತರಗತಿಯಲ್ಲಿ ಕುಳಿತುಕೊಂಡರು.ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳನ್ನ ಶಿಕ್ಷಕರು ಸ್ವಾಗತಿಸುವ ಮೂಲಕ ಬರಮಾ ಡಿಕೊಂಡ ದೃಶ್ಯಗಳು ಕಂಡುಬಂದವು.ಈ ವೇಳೆ ಗುಂಡ್ಲು ಪೇಟೆ ಬಿ.ಇ.ಓ ಶಿವಮೂರ್ತಿ ಸೇರಿದಂತೆ ಶಿಕ್ಷಕರು ಇದ್ದರು.