ಅರಕಲಗೂಡು –
ಇತ್ತೀಚೆಗೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕ ರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವೇತನ ಜಮೆಯಾದ ನಂತರ ಅವರಿಂದ ಶಾಲೆಗಳ ಮುಖ್ಯಶಿಕ್ಷಕ ರು ಮತ್ತು ಸಂಪನ್ಮೂಲ ವ್ಯಕ್ತಿಗಳು ಇವರಿಂದ ಹಣವನ್ನು ಕೇಳುತ್ತಿದ್ದಾ ರೆಂದು ಅತಿಥಿ ಶಿಕ್ಷಕರು ಅರಕಲಗೂಡು ಬಿಇಓ ಅವರಿಗೆ ದೂರನ್ನು ನೀಡದ್ದಾರೆ.

ತಾಲೂಕಿನ ಕೆಲ ಶಾಲೆಗಳಲ್ಲಿ ಅತಿಥಿ ಶಿಕ್ಷಕ ರಿಂದ ವೇತನ ಜಮೆ ಯಾದ ನಂತರ ಹೀಗೆ ಕೇಳುತ್ತಿರುವ ಕುರಿತು ಅತಿಥಿ ಶಿಕ್ಷಕರು ಬಿಇಓ ಅವರಿಗೆ ದೂರನ್ನು ನೀಡುತ್ತಿದ್ದು ದೂರಿನ ಹಿನ್ನೆಲೆಯಲ್ಲಿ ಹೀಗೆ ಹಣವನ್ನು ಕೇಳುತ್ತಿರುವ ಶಿಕ್ಷಕ ರಿಗೆ ಬಿಇಓ ಅವರು ಖಡಕ್ ಸೂಚನೆ ನೀಡಿ ಆದೇಶವನ್ನು ಮಾಡಿದ್ದಾರೆ.