6 ತಿಂಗಳಿನಿಂದ ವೇತನವಿಲ್ಲದೇ ಪರದಾಡುತ್ತಿರುವ ಅತಿಥಿ ಶಿಕ್ಷಕರು – ವೇತನವಿಲ್ಲದೇ ಹೇಗೆ ಬದುಕೊದು ಸ್ವಾಮಿ ಹೇಳಿ ಎನ್ನುತ್ತಿರುವ ಶಿಕ್ಷಕರು…..

Suddi Sante Desk
6 ತಿಂಗಳಿನಿಂದ ವೇತನವಿಲ್ಲದೇ ಪರದಾಡುತ್ತಿರುವ ಅತಿಥಿ ಶಿಕ್ಷಕರು – ವೇತನವಿಲ್ಲದೇ ಹೇಗೆ ಬದುಕೊದು ಸ್ವಾಮಿ ಹೇಳಿ ಎನ್ನುತ್ತಿರುವ ಶಿಕ್ಷಕರು…..

ಬೆಂಗಳೂರು

6 ತಿಂಗಳಿನಿಂದ ವೇತನವಿಲ್ಲದೇ ಪರದಾ ಡುತ್ತಿರುವ ಅತಿಥಿ ಶಿಕ್ಷಕರು – ವೇತನವಿಲ್ಲದೇ ಹೇಗೆ ಬದುಕೊದು ಸ್ವಾಮಿ ಹೇಳಿ ಎನ್ನುತ್ತಿರುವ ಶಿಕ್ಷಕರು ಹೌದು ಇಂತಹ ದೊಂದು ಪರಿಸ್ಥಿತಿ ಯಲ್ಲಿ ರಾಜ್ಯದ ಅತಿಥಿ ಶಿಕ್ಷಕರಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ವೇತನವಿ ಲ್ಲದೇ ಪರದಾಡುತ್ತಿದ್ದಾರೆ.ಹೌದು ಕಳೆದ 6 ತಿಂಗಳಿನಿಂದ ವೇತನವಿಲ್ಲದೇ ಇಲ್ಲಿನ ಅತಿಥಿ ಶಿಕ್ಷಕರು ಪರದಾಡುತ್ತಿದ್ದು 6 ತಿಂಗಳಾದ್ರೂ ವೇತನವನ್ನು ನೀಡದಿರುವ ವಿಚಾರ ಸಧ್ಯ ಬೆಳಕಿಗೆ ಬಂದಿದ್ದು ಅತಿಥಿ ಶಿಕ್ಷಕರಿಗೆ ವೇತನವಿಲ್ಲದೆ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.

ಹೀಗಾಗಿ ಜೀವನ ಮಾಡೋದು ಹೇಗೆ ಹೇಳಿ ಸ್ವಾಮಿ ಎಂದು ರಾಜ್ಯದ ಶಿಕ್ಷಣ ಸಚಿವರನ್ನು ಕೇಳುತ್ತಿದ್ದಾರೆ.ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕಳೆದ 6 ತಿಂಗಳಿನಿಂದ ವೇತನ ವಾಗದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾ ಗುತ್ತಿದೆ

ಶಿಕ್ಷಣ ಇಲಾಖೆಯು 2023-24ನೇ ಸಾಲಿನಲ್ಲಿ 2 ಹಂತದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕೊಂಡಿದೆ.ಮೊದಲ ಹಂತದಲ್ಲಿ ಜೂನ್‌ನಲ್ಲಿ 33 ಸಾವಿರ ಶಿಕ್ಷಕರು ಮತ್ತು 2ನೇ ಹಂತದಲ್ಲಿ ಆಗಸ್ಟ್‌ ನಲ್ಲಿ 10 ಸಾವಿರ ಸೇರಿ ಒಟ್ಟು 43 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ

ಮೊದಲ ಹಂತದಲ್ಲಿ ನೇಮಕವಾಗಿರುವ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ವೇತನವನ್ನು ಪಾವತಿ ಮಾಡಲಾಗುತ್ತಿದೆ.ಆದರೆ 2ನೇ ಹಂತದಲ್ಲಿ ನೇಮಕವಾಗಿರುವ ಶಿಕ್ಷಕರು ನೇಮಕವಾದ ಅಂದಿನಿಂದ ಈ ವರೆಗೂ ವೇತನವನ್ನೇ ನೋಡಿಲ್ಲ 6 ತಿಂಗಳಿನಿಂದ ವೇತನ ನೀಡದಿರುವ ಕಾರಣ ಸಾಕಷ್ಟು ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10 ಸಾವಿರ ರೂ.ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 10,500 ರೂ.ಗಳನ್ನು ಸರ್ಕಾರವು ನೀಡುತ್ತಿದೆ.ಅತಿಥಿ ಶಿಕ್ಷಕರ ಗೌರವ ಧನ ಕೊಡುತ್ತಿರುವುದೇ ಕಡಿಮೆ ಅದನ್ನೂ ನೀಡದಿದ್ದರೆ ಏನು ಮಾಡುವುದು ಎಂಬುದನ್ನು ಸರ್ಕಾರವೆ ತಿಳಿಸಬೇಕು ಎನ್ನತ್ತಾರೆ ಅತಿಥಿ ಶಿಕ್ಷಕರು ಒತ್ತಾಯಿಸಿದ್ದಾರೆ.

ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆಸಿದ್ದ ಹೋರಾಟದ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಒಂದು ವಾರ ದೊಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದರು

ಆದರೆ 6 ತಿಂಗಳಾದರೂ ಈಡೇರಿಸುವ ಮನಸ್ಸು ಮಾಡಿಲ್ಲ.ಕೂಡಲೇ ಸರ್ಕಾರವು ಕೊಟ್ಟ ಮಾತಿ ನಂತೆ ನಡೆದುಕೊಳ್ಳಬೇಕು ಎಂದು ಅತಿಥಿ ಶಿಕ್ಷಕರು ಒತ್ತಾಯಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.