ಹುಬ್ಬಳ್ಳಿ –
BRTS MD ಯಾಗಿ ಅಧಿಕಾರ ವಹಿಸಿಕೊಂಡ ಪ್ರೀಯಾಂಗ ಎಮ್ – ಸ್ವಾಗತ ಮಾಡಿಕೊಂಡ HDBRTS ಟೀಮ್
ಹೌದು ಹುಬ್ಬಳ್ಳಿ ಧಾರವಾಡ ಬಿಆರ್ ಟಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಶ್ರೀಮತಿ ಪ್ರೀಯಾಂಗ ಎಮ್ ಅಧಿಕಾರವನ್ನು ವಹಿಸಿಕೊಂಡರು.ಸಧ್ಯ ವಾ.ಕ.ರ.ಸಾ.ಸಂಸ್ಥೆಯ ಶ್ರೀಮತಿ ಪ್ರೀಯಾಂಗ ಎಮ್ ಐ.ಎ.ಎಸ್. ವ್ಯವಸ್ಥಾಪಕ ನಿರ್ದೇಶಕರಾಗಿರುವ ಇವರಿಗೆ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಕಂಪನಿ ವ್ಯವಸ್ಥಾಪಕ ನಿದೇಶಕರ ಹುದ್ದೆಯನ್ನು ಹೆಚ್ಚುವರಿಯನ್ನಾಗಿ ನೀಡಿ ಆದೇಶವನ್ನು ಮಾಡಿದೆ.
ರಾಜ್ಯ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಅಧಿಕಾರ ವನ್ನು ಸ್ವೀಕಾರ ಮಾಡಿದರು.ಶ್ರೀಮತಿ ಪ್ರೀಯಾಂಗ ಎಮ್ ವ್ಯವಸ್ಥಾಪಕ ನಿರ್ದೇಶಕರು ವಾ.ಕ.ರ.ಸಾ ಸಂಸ್ಥೆ ಹುಬ್ಬಳ್ಳಿ. ಇವರಿಗೆ ವ್ಯವಸ್ಥಾಪಕ ನಿರ್ದೇಶಕರು, ಹೆಚ್‌ಡಿಬಿಆರ್‌ಟಿಎಸ್ ಕಂಪನಿಯ ಹೆಚ್ಚುವರಿ ಪ್ರಭಾರ ಹುದ್ದೆಯನ್ನು ನೀಡಲಾಗಿದೆ.ಬಿರ್ ಟಿಎಸ್ ಇಲಾಖೆಯ ವಿಶೇಷ ಭೂಸ್ವಾಧಿನಕಾರಿ ಶ್ರೀಮತಿ ಗೀತಾ ಹೊನಕೇರಿ ಅವರು ಶ್ರೀಮತಿ ಪ್ರೀಯಾಂಗ ಎಮ್ ವ್ಯವಸ್ಥಾಪಕ ನಿರ್ದೇಶಕರು ವಾ.ಕ.ರ.ಸಾ ಸಂಸ್ಥೆ ಇವರಿಗೆ ಹೂವಿನ ಗಿಡದ ಸಸಿ ನೀಡಿ ಸ್ವಾಗತಿಸಿದರು.
ಇನ್ನೂ ಈ ಹಿಂದೆ ಬಿಆರ್ ಟಿಎಸ್ ಆರಂಭವಾದಾ ಗಿನಿಂದ ವಾಯವ್ಯ ಸಾರಿಗೆ ಸಂಸ್ಥೆ ಮತ್ತು ಬಿಆರ್ ಟಿಎಸ್ ಎರಡು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ಒಬ್ಬ ಅಧಿಕಾರಿ ನೋಡಿಕೊಳ್ಳುತ್ತಿದ್ದರು.ಇದೇ ಮೊದಲ ಬಾರಿಗೆ ಈ ಹಿಂದೆ ಶಿವಾನಂದ ಭಜಂತ್ರಿ ಯವರು ಪ್ರತ್ಯೇಕವನ್ನಾಗಿ ಮಾಡಿ ಇದಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಇವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಸಧ್ಯ ಈ ಒಂದು ಜವಾಬ್ದಾರಿ ಯನ್ನು ಹೆಚ್ಚುವರಿಯಾಗಿ ಶ್ರೀಮತಿ ಪ್ರೀಯಾಂಗ ಎಮ್ ಅವರಿಗೆ ನೀಡಲಾಗಿದೆ.
ಅಧಿಕಾರವನ್ನು ವಹಿಸಿಕೊಂಡ ಬೆನ್ನಲ್ಲೇ ಬಿಆರ್ ಟಿಎಸ್ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿ ಕೆಲವೊಂ ದಿಷ್ಟು ವಿಚಾರಗಳ ಕುರಿತಂತೆ ಸಭೆಯನ್ನು ಮಾಡಿ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಡಿಸಿ ಯವರಿಗೆ ಸೇರಿದಂತೆ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು.ಈ ಒಂದು ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……