ಶಿವಮೊಗ್ಗ –
ಮೂರು ದಿನಗಳ ಹಿಂದೆಯಷ್ಟೇ ಕೊರೋನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ವೈದ್ಯರೊಬ್ಬರು ಸಾವಿಗೀಡಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಜೆಪಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಸುಬ್ಬಯ್ಯ ಮೆಡಿಕಲ್ ಜ್ಯೂನಿಯರ್ ವೈದ್ಯರಾದ ಡಾ.ಜಯಪ್ರಕಾಶ್ (57) ಸಾವಿಗೀಡಾದ ವೈದ್ಯರಾಗಿದ್ದಾರೆ.
ಕರೋನ ವ್ಯಾಕ್ಸಿನ್ ನಿಂದಾಗಿ ಇವರು ನಿಧನರಾಗಿಲ್ಲ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಡಿಎಚ್ ಓ ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದ್ದಾರೆ.
ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೂರು ದಿನಗಳ ಹಿಂದೆ ಡಾ.ಜೆಪಿ ಕೊರೋನ ವ್ಯಾಕ್ಸಿನ್ ತೆಗೆದುಕೊಂಡಿದ್ದರು.ಅವರು ಹೃದಯ ಕಾಯಿಲೆಯ ರೋಗಿ ಆಗಿದ್ದರು.ಅವರಿಗೆ ಉಸಿರಾಟ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡಿತ್ತು ಶಿವಮೊಗ್ಗ ದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ನಿಧನರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿದ್ದು ಏನೇ ಆಗಲಿ ಹಿರಿಯ ವೈಧ್ಯರೊಬ್ಬರು ಸಾವಿಗೀಡಾಗಿದ್ದು ವಿಷಾದದ ಸಂಗತಿ.