ಚೆಕ್ ಪೊಸ್ಟ್ ನಲ್ಲಿ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ ಮತ್ತು ಶಿಕ್ಷಕ – ಕಾರಣ ಕೇಳಿದರೆ ಶಾಕ್ ಆಗುತ್ತೆ…..

Suddi Sante Desk
ಚೆಕ್ ಪೊಸ್ಟ್ ನಲ್ಲಿ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ ಮತ್ತು ಶಿಕ್ಷಕ – ಕಾರಣ ಕೇಳಿದರೆ ಶಾಕ್ ಆಗುತ್ತೆ…..

ಬಾಗಲಕೋಟ

ಬಿಸಿಯೂಟಕ್ಕಾಗಿ ಶಾಲೆಗೆ ಬಂದಿದ್ದ 100 ಕೆಜಿ ಗೋಧಿ ಮತ್ತು ಬೆಳೆಯನ್ನು ಮನೆಗೆ ಸಾಗಿಸುತ್ತಿದ್ದ ವೇಳೆ ಚೆಕ್ ಪೋಸ್ಟ್ ನಲ್ಲಿ ಇಬ್ಬರು ಶಿಕ್ಷಕರು ಸಿಕ್ಕಿ ಬಿದ್ದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಿಸಿಯೂಟಕ್ಕಾಗಿ ಶಾಲೆಗೆ ಬಂದಿದ್ದ ರೇಷನ್ ಅನ್ನು ಮನೆಗೆ ಸಾಗಿಸುತ್ತಿದ್ದರು ಶಿಕ್ಷಕರು

ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದಾಗ  ಪೊಲೀಸರ ಬಲೆಗೆ ಬಿದ್ದಿದ್ದಾರೆ.ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾಗಿದ್ದ ಬಾಗಲಕೋಟೆಯ ವಿದ್ಯಾಗಿರಿ ಚೆಕ್‌ಪೋಸ್ಟ್ ಬಳಿ ಈ ಪ್ರಕರಣ ಬೆಳಕಿಗೆ ಬಂದಿದೆ.ತಲಾ 100 ಕೆಜಿ ಗೋಧಿ,ಬೇಳೆ ಹಾಗೂ 50 ಪ್ಯಾಕೆಟ್‌ ಅಡುಗೆ ಎಣ್ಣೆ ಜತೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ಬೇವೂರ್, ಹಾಗೂ ಸಹ ಶಿಕ್ಷಕ ಶಶಿಧರ್ ನರಸಪ್ಪನವರ್ ಈಗ ಸಿಕ್ಕಿಬಿದ್ದ ಶಿಕ್ಷಕರಾಗಿದ್ದಾರೆ. ಶಾಲೆಗೆ ಮಕ್ಕಳ ಬಿಸಿಯೂಟಕ್ಕಾಗಿ ನೀಡುವ ರೇಷನ್ ಅನ್ನು ಇವರು ತಮ್ಮ ಮನಗಳಿಗೆ ಸಾಗಾಟ ಮಾಡುತ್ತಿದ್ದರು.

ವಿದ್ಯಾಗಿರಿಯ ಬಿಟಿಡಿಎ ಸರ್ಕಾರಿ ಕಿರಿಯ ಪ್ರಾಥ ಮಿಕ ಶಾಲೆ ನಂಬರ್ 15ರ ಶಿಕ್ಷಕರಾಗಿದ್ದಾರೆ. ಶಾಲೆಗೆ ಬಂದಿರುವ ರೇಷನ್ ಅನ್ನು ಟಾಟಾ ಏಸ್ ವಾಹನದ ಮೂಲಕ ಮನೆಗೆ ಸಾಗಿಸುತ್ತಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ವಿದ್ಯಾಗಿರಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸಿ ದ್ದಾರೆ.

ಆಗ ಇವುಗಳಿಗೆ ದಾಖಲೆ ಇಲ್ಲ ಎಂಬುದು ಗೊತ್ತಾಗಿದೆ.ಬಳಿಕ ವಿಚಾರಣೆ ನಡೆಸಿದಾಗ ಶಾಲೆಗೆ ಬಂದಿದ್ದ ರೇಷನ್‌ ಎಂಬುದು ತಿಳಿದು ಬಂದಿದೆ. ಹಾಗಾಗಿ ವಾಹನದಲ್ಲಿ ತಂದಿದ್ದ 100 ಕೆಜಿ ಗೋಧಿ 100 ಕೆಜಿ ಬೇಳೆ ಹಾಗೂ 50 ಪ್ಯಾಕೆಟ್ ಅಡುಗೆ ಎಣ್ಣೆಯನ್ನು ಸೀಜ್‌ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.