ಕೊಡಗು –
ಕಡತ ವರ್ಗಾವಣೆ ಮಾಡಿಕೊಡಲು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿರಸ್ತೆದಾರ ಎಸಿಬಿ ಬಲೆಗೆ ಬಿದ್ದ ಘಟನೆ ಕೊಡಗಿ ನಲ್ಲಿ ನಡೆದಿದೆ.

ಅಂದಗೋವೆ ಬೆಳ್ಳಿಯಪ್ಪ ಎಂಬುವರಿಂದ ಕಚೇರಿ ಬಳಿ ಕ್ಯಾಂಟೀನ್ ನಲ್ಲಿ ಲಂಚ ಸ್ವೀಕರಿಸುವಾಗ ಶಿರಸ್ತೆದಾರ್ ವಿನೋದ್ ಸೆರೆಸಿಕ್ಕಿದ್ದಾರೆ.ಕಡತ ವರ್ಗಾವಣೆ ಮಾಡಿ ಕೊಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಈ ಕುರಿತು ಎಸಿಬಿ ಗೆ ದೂರನ್ನು ನೀಡಲಾಗಿತ್ತು.ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿ ಶಿರಸ್ತೆದಾರನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.ಕೊಡಗು ಜಿಲ್ಲೆ ಕುಶಾಲ ನಗರ ತಾಲೂಕು ಕಚೇರಿ ಮೇಲೆ ಎಸಿಬಿ ದಾಳಿ ಮಾಡಿದ್ದು ಶಿರಸ್ತೆ ದಾರ್ ವಿನೋದ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸೆರೆ ಹಿಡಿಯಲಾಗಿದೆ