ಕೊರಟಗೆರೆ –
ಸರ್ಕಾರಿ ಕೆಲಸಕ್ಕಾಗಿ ತಹಶಿಲ್ದಾರ್ ಕಛೇರಿಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರಕಾರಿ ಕೆಲಸ ಶಿಕ್ಷಕ ಹುದ್ದೆಯನ್ನು ಪಡೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕೋಳಾಲ ಮೂಲದ ಮುಖ್ಯ ಶಿಕ್ಷಕರ ವಿರುದ್ದ ಈ ಒಂದು ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ನೆಲಮಂಗಲ ತಾಲ್ಲೂಕು ಗೋವಿನಹಳ್ಳಿ ಸರಕಾರಿ ಶಾಲೆಯ ಲ್ಲಿ ಮುಖ್ಯಶಿಕ್ಷಕ ಅಗಿರುವ ಲೇಟ್ ನಾಗಣ್ಣನ ಮಗನಾದ ವೀರಮಲ್ಲಯ್ಯ(59) ಮೂಲತಃ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ರಂಗಾಪುರ ಗ್ರಾಮದ ನಿವಾಸಿಯಾಗಿದ್ದಾರೆ.
ಮುಖ್ಯ ಶಿಕ್ಷಕ ವೀರಮಲ್ಲಯ್ಯ ಮೂಲತಃ ಪ್ರವರ್ಗ-2(A) ರಲ್ಲಿ ಬರುವ ಕುರುಬ ಸಮುದಾಯಕ್ಕೆ ಸೇರಿದ್ದಾನೆ.ಕೊರಟ ಗೆರೆ ತಹಶಿಲ್ದಾರ್ ರಿಂದ 1985 ಸೆಪ್ಟೆಂಬರ್ 20 ರಂದು ಐಸಿಸಿ ಆರ್/37/1985- 86 ರ ಪರಿಶಿಷ್ಟ ಪಂಗಡದ ಕಾಡ ಕುರುಬ ಎಂಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಕೊಂಡು ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ ಪರಿಶಿಷ್ಟ ಪಂಗಡದ ಮೀಸಲಾತಿ ಕೋಟಾದಲ್ಲಿಯೇ ಶಾಲಾ ಶಿಕ್ಷಕ ನಾಗಿ ನೇಮಕ ಆಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಸರಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ ಸರಕಾರಿ ನೌಕರಿಗೆ ನೇಮಕಾತಿ ಮತ್ತು ಮುಖ್ಯ ಶಿಕ್ಷಕನಾಗಿ ಮುಂಬಡ್ತಿ ಯನ್ನು ಹಾಗೂ ಇತರೆ ಎಲ್ಲಾ ರೀತಿಯ ಸರಕಾರಿ ಸೌಲಭ್ಯ ಪಡೆದುಕೊಂಡು ಸರಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ವಂಚನೆ ಮಾಡಿರುವುದು ಸಾಬೀತಾಗಿದ್ದು ಈ ಕುರಿತು ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದಾರೆ