ಶಹಾಪೂರ –
ನಿವೃತ್ತಿ ಅಂಚಿನಲ್ಲಿದ್ದ ಮುಖ್ಯ ಶಿಕ್ಷಕರೊಬ್ಬರು ನಿಧನ ರಾಗಿದ್ದಾರೆ ಹೌದು ಎ ಪಿ ತಿನೇಕರ ನಿಧನರಾದ ಶಿಕ್ಷಕ ರಾಗಿದ್ದಾರೆ.ಬೆಳಗಾವಿ ತಾಲೂಕಿನ ಮರಣಹೊಳ್ಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಮುಖ್ಯ ಶಿಕ್ಷಕರಾದ ಎ ಪಿ ತಿನೇಕರ (60) ರವರು ಇಂದು ಮುಂಜಾನೆ ಅನಾರೋಗ್ಯ ದಿಂದ ಬೆಳಗಾವಿ ನಗರದ ಆಸ್ಪತ್ರೆ ಯಲ್ಲಿ ನಿಧನರಾದರು
ಇನ್ನೂ ಮೃತರ ಅಂತ್ಯಕ್ರಿಯೆ ಶಹಪುರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.ಇನ್ನೂ ಇದೇ ತಿಂಗಳು 28 ರಂದು ಸೇವೆಯಿಂದ ನಿವೃತ್ತಿ ಯಾಗುವವರಿದ್ದರು.ಸರಳ ಸಜ್ಜನಿ ಕೆಯ ಸ್ನೇಹ ಜೀವಿಯಾಗಿದ್ದ ಎ ಪಿ ತಿನೇಕರ ರವರ ನಿಧನಕ್ಕೆ ಬೆಳಗಾವಿ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಸುಣಗಾರ ಶೋಕ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಬಯಸಿದ್ದಾರೆ ಇದರೊಂದಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿದ್ದಾರೆ