ಬೆಂಗಳೂರು –
ಹೌದು ಕರ್ನಾಟಕದಲ್ಲಿ ಜೂನ್‌ನಲ್ಲಿ 406 ರಷ್ಟು ಇದ್ದ ಡೆಂಗ್ಯೂ ಹಾಟ್‌ಸ್ಪಾಟ್‌ಗಳ ಸಂಖ್ಯೆ ಈಗ 12 ಕ್ಕೆ ಇಳಿದಿದೆ ಇತ್ತೀಚೆಗೆ ಮತ್ತೆ ಮಳೆಯಾಗಿದ್ದರಿಂದ ಸೋಂಕು ಹರಡ ದಂತೆ ವೈರಸ್ ಅನ್ನು ನಿಯಂತ್ರಣದಲ್ಲಿಡಲು ಕಟ್ಟು ನಿಟ್ಟಾದ ಕ್ರಮಗಳನ್ನು ಮುಂದುವರೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮಳೆಯ ನಂತರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಎಚ್ಚರದಿಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟುನಿಟ್ಟಾದ ಕ್ರಮಗಳನ್ನು ಮುಂದುವರಿಸಿದೆ ಎಂದು ಇಲಾಖೆಯ ಆಯುಕ್ತ ಶಿವಕುಮಾರ್ ಕೆಬಿ ತಿಳಿಸಿದ್ದಾರೆ.
ಪ್ರತಿ ತಿಂಗಳ ಮೊದಲ 15 ದಿನಗಳಲ್ಲಿ ಇಲಾಖೆಯ ಸ್ವಯಂಸೇವಕರು 90-95 ಲಕ್ಷ ಕುಟುಂಬಗಳನ್ನು ಒಳಗೊಂಡಂತೆ ಪರಿಶೀಲನೆ ನಡೆಸುತ್ತಾರೆ. ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳು ಸ್ವಚ್ಛತೆ ಕಾಪಾಡದ ಪ್ರದೇಶಗಳನ್ನು ಗುರುತಿಸಿ ಅಂಥವರ ಮಾಲೀಕರ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಹೊಂದಿ ರುವ ಆಸ್ತಿ ಮಾಲೀಕರಿಂದ 6.5 ಲಕ್ಷ ರೂ. ಮತ್ತು ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 35,000 ರೂ. ದಂಡವನ್ನು ಸಂಗ್ರಹಿಸಿದ್ದೇವೆ ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕೇಂದ್ರದ (ಎನ್‌ಸಿವಿಬಿಡಿಸಿ) ಉಪ ನಿರ್ದೇಶಕ ಡಾ.ಶರೀಫ್ ತಿಳಿಸಿದ್ದಾರೆ
ರಾಜ್ಯದ ಪ್ರಸ್ತುತ 12 ಹಾಟ್‌ಸ್ಪಾಟ್‌ಗಳಲ್ಲಿ ಬಿಬಿಎಂಪಿ ಯಲ್ಲಿ ಒಂಬತ್ತು, ಕಲಬುರಗಿಯಲ್ಲಿ ಎರಡು ಮತ್ತು ರಾಯಚೂರಿನಲ್ಲಿ ಒಂದು ಹಾಟ್‌ಸ್ಪಾಟ್ ಸೇರಿವೆ ಎಂದು ಅವರು ತಿಳಿಸಿದ್ದಾರೆ. 100 ಮೀಟರ್ ವ್ಯಾಪ್ತಿಯೊಳಗೆ ಕನಿಷ್ಠ ಎರಡು ಡೆಂಗ್ಯೂ ಪಾಸಿಟಿವ್ ಪ್ರಕರಣಗಳಿದ್ದಾಗ ಆ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾ ಗುತ್ತದೆ. ಈ ವರ್ಷ ರಾಜ್ಯಾದ್ಯಂತ ಈವರೆಗೆ 66,784 ಸೊಳ್ಳೆ ನಿವಾರಕಗಳನ್ನು ವಿತರಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..