ಬೆಂಗಳೂರು –
ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.ಅಧಿವೇಶನದಲ್ಲಿ ಮಾತನಾ ಡಿದ ಅವರು ನ್ಯಾಯಾಲಯದ ಆದೇಶ ಪಾಲನೆ ಮಾಡು ವುದು ಸರ್ಕಾರದ ಕರ್ತವ್ಯ ಮತ್ತು ಬದ್ಧತೆ ಎಂದರು. ಇನ್ನೂ ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಸಮಸ್ಯೆ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ.ಅದನ್ನು ನಾವು ಪರಿಶೀಲನೆ ಮಾಡ್ತಿದ್ದು ಶೀಘ್ರದಲ್ಲೇ ಒಂದು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು
ಹಿಜಾಬ್ ವಿವಾದದ ಬಗ್ಗೆ ಸದನದಲ್ಲಿ ಉತ್ತರ ಕೊಡಲಾ ಗುವುದು.ನಮಗೂ ಸಮವಸ್ತ್ರ ಪಾಲನೆ ವಿಚಾರದಲ್ಲಿ ಸ್ಪಷ್ಟತೆ ತರುವ ಸದುದ್ದೇಶ ಇದೆ.ಇವತ್ತು ಸದನದಲ್ಲಿ ಈ ವಿಚಾರ ಪ್ರಸ್ತಾಪ ಆಯ್ತು.ಅಗತ್ಯವಿರುವಷ್ಟು ಉತ್ತರ ಕೊಡಲಾಗಿದೆ.ಇನ್ನೂ ಹೆಚ್ಚಿನ ಉತ್ತರ ನಾವು ಕೊಡಲು ಶಕ್ತವಾಗಿದ್ದೇವೆ.ಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ.ಅದರ ಅರಿವು ನಮಗಿದೆ.ಎಲ್ಲರೂ ಆದೇಶಕ್ಕೆ ಬದ್ಧ ಆಗಿರಬೇಕು ಎಂದು ಜ್ಞಾನೇಂದ್ರ ಹೇಳಿದರು.