ಬೆಂಗಳೂರು –
ವರ್ಗಾವಣೆ ಸಿಗದೇ ಆತಂಕದಲ್ಲಿರುವ ನಾಡಿನ ಶಿಕ್ಷಕ ರಿಗೆ ಇಲಾಖೆಯ ಹೊಸ ಆದೇಶವೊಂದು ಆಶಾ ಭಾವನೆಯನ್ನು ಮೂಡಿಸಿದೆ ಹೌದು ಶಾಲಾ ಶಿಕ್ಷಕ ರನ್ನು ಅವರ ಸೇವಾವಧಿಯಲ್ಲಿ ಒಂದು ಬಾರಿ ಅವರ ತವರು ಜಿಲ್ಲೆಗೆ ನೇಮಿಸಲು ಶಿಕ್ಷಣ ಇಲಾಖೆಯು ಮುಂದಾಗಿದೆ.ಹೌದು ಈ ಬಗ್ಗೆ ಕೂಡಲೇ ಸಮಗ್ರ ವಾದ ಅಭಿಪ್ರಾಯವನ್ನು ಕ್ರೋಢೀಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಈ ಹಿಂದೆ ಕೋವಿಡ್ ಕಾರಣದಿಂದಾಗಿ ಕಳೆದ 18 ತಿಂಗಳಿನಿಂದ ಬಹುತೇಕ ಶಾಲೆಗಳು ಮುಚ್ಚಿದ್ದು ಈ ಮಧ್ಯೆ ಎರಡು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ಯೂ ನಡೆಯದೆ ಶಿಕ್ಷಕರು ಗೊಂದಲದೊಂದಿಗೆ ಆತಂಕ ಗೊಂಡಿದ್ದಾರೆ.ತಂದೆ ತಾಯಿ ಒಂದು ಕಡೆ ಹೆಂಡತಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಕರ್ತವ್ಯ ಮತ್ತೊಂದು ಕಡೆಗೆ ಹೀಗೆ ನಾಲ್ಕು ದಿಕ್ಕಿನಲ್ಲಿರುವ ಶಿಕ್ಷಕ ರಿಗೆ ಇಲಾಖೆ ಹೊಸ ಆಶಾ ಭಾವನೆ ಯನ್ನು ಮೂಡಿಸಿದೆ.ಶಿಕ್ಷಣ ಇಲಾಖೆ ಹೊರಡಿಸಿರುವ ಈ ನೂತನ ಆದೇಶದಿಂದ ಶಿಕ್ಷಕರಲ್ಲಿ ಸ್ವಲ್ಪ ಮಟ್ಟಿನ ಆಶಾದಾಯಕ ಮೂಡಿದ್ದು ಇದರಿಂದಾದರೂ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಅನುಕೂಲ ಆಗುತ್ತದೆ ಎಂಬುದನ್ನು ಕಾದು ನೋಡಬೇಕು