ಬೆಂಗಳೂರು –
ಈಗಾಗಲೇ ಪ್ರತಿದಿನ ಒಂದಿಲ್ಲೊಂದು ಬೆಲೆ ಏರಿಕೆಯಿಂ ದಾಗಿ ಕಂಗಾಲಾಗಿರುವ ಸಾರ್ವಜನಿಕರಿಗೆ ನಾಳೆಯಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ.ಹೌದು ಗ್ರಾಹಕರ ಮೇಲೆ ಮತ್ತೊಂದು ಬೆಲೆ ಏರಿಕೆಯ ಹೊರೆ ಬೀಳಲಿದ್ದು ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬರೆ ಬೀಳಲಿದೆ.ಈಗಾಗಲೇ ಅಡುಗೆ ಎಣ್ಣೆ, ಡೀಸೆಲ್,ಗ್ಯಾಸ್ ದರ ಹೆಚ್ಚಳ ಕಾರಣ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.
ಅಡುಗೆ ಎಣ್ಣೆ 200 ರೂ.ಆಗಿದೆ.ಗ್ಯಾಸ್,ಡೀಸೆಲ್,ರೇಷನ್ ದರ ಕೂಡ ಹೆಚ್ಚಳ ವಾಗಿರುವುದರಿಂದ ಏಪ್ರಿಲ್ 1 ರಿಂದ ಹೋಟೆಲ್ ಗಳಲ್ಲಿ ಊಟ,ತಿಂಡಿ ದರ ಶೇಕಡಾ ಹತ್ತರಷ್ಟು ಹೆಚ್ಚಳವಾಗಲಿದೆ. ಈಗಾಗಲೇ ಎಲ್ಲಾ ವಸ್ತುಗಳ ಬೆಲೆ ಏರಿಕೆಯ ನಡುವೆ ಕಂಗಾಲಾಗಿರುವ ಸಾರ್ವಜನಿಕರಿಗೆ ನಾಳೆಯಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿಯಾಗ ಲಿದ್ದು ವಡೆ 25 ರೂಪಾಯಿ, ಪೂರಿ 50 ರೂಪಾಯಿಗೆ ಏರಿಕೆಯಾಗಲಿದೆ.ಉಳಿದಂತೆ ಎಲ್ಲಾ ತಿಂಡಿ ತಿನಿಸುಗಳ ಬೆಲೆ ಹಾಗೇ ಊಟದ ಬೆಲೆ ಹೆಚ್ಚಳ ಮಾಡಲು ಹೊಟೇಲ್ ಮಾಲೀಕರು ನಿರ್ಧಾರವನ್ನು ಕೈಗೊಂಡಿದ್ದು ಇದನ್ನು ಸಾರ್ವ ಜನಿಕರು ಹೇಗೆ ಸ್ವಾಗತ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ
ಮಂಜುನಾಥ ಸರ್ವಿ ಜೊತೆ ಪರಶುರಾಮ ಗೌಡರ ಸುದ್ದಿ ಸಂತೆ ನ್ಯೂಸ್ ಧಾರವಾಡ