ಮನೆಗಳ್ಳರನ್ನು ಬಂಧನ ಮಾಡಿದ ಶಹರ ಠಾಣೆ ಪೊಲೀಸರು – ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ನೇತ್ರತ್ವದಲ್ಲಿ ನಡೆಯಿತು ಭರ್ಜರಿ ಕಾರ್ಯಾಚರಣೆ ಸಿಬ್ಬಂದಿಗಳ ಕಾರ್ಯಕ್ಕೆ ಆಯುಕ್ತರ ಮೆಚ್ಚುಗೆ…..

Suddi Sante Desk
ಮನೆಗಳ್ಳರನ್ನು ಬಂಧನ ಮಾಡಿದ ಶಹರ ಠಾಣೆ ಪೊಲೀಸರು – ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ನೇತ್ರತ್ವದಲ್ಲಿ ನಡೆಯಿತು ಭರ್ಜರಿ ಕಾರ್ಯಾಚರಣೆ ಸಿಬ್ಬಂದಿಗಳ ಕಾರ್ಯಕ್ಕೆ ಆಯುಕ್ತರ ಮೆಚ್ಚುಗೆ…..

ಧಾರವಾಡ

ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಒಟ್ಟು ಅಂದಾಜು 5,60,500/- ರೂ ಕಿಮ್ಮತ್ತಿನ 100 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು 150 ಗ್ರಾಂ ತೂಕದ ಬೆಳ್ಳಿಯ ಆಭರಣಗಳ ಜಪ್ತಿ ಮಾಡಿ4 ಜನ ಮನೆಕಳ್ಳರ ಬಂಧನ ಮಾಡಲಾಗಿದೆ

ಧಾರವಾಡ ಶಹರ ಪೊಲೀಸ ಠಾಣಾ ವ್ಯಾಪ್ತಿಯ ಧಾರವಾಡ ಮಹಾವೀರ ಕಾಲೋನಿ 05 ನೇ ಕ್ರಾಸ ಸಂಗೋಳ್ಳಿ ಹಾಲ್ ಹತ್ತಿರ ಇರುವ ಶ್ರೀಮತಿ ಶೈಲಾ ಕೊಂ ಚಿದಾನಂದ ಕುಂಬಾರ ಠಾಣೆಯಲ್ಲಿ ಮನೆ ಯಲ್ಲಿ ಕಳ್ಳತನವಾದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಇತರೇ ವಸ್ತುಗಳು ಕಳ್ಳತನವಾದ ಬಗ್ಗೆ ದೂರು ನೀಡಿದ್ದರು

ಸದರ ಪ್ರಕರಣವನ್ನು ಪತ್ತೆ ಮಾಡುವ ಕುರಿತು ಶ್ರೀಮತಿ ರೇಣುಕಾ ಕೆ ಸುಕುಮಾರ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ, ರಾಜೀವ ಎಮ್ ಡಿ.ಸಿ.ಪಿ (ಕಾವಸು) ಹುಬ್ಬಳ್ಳಿ-ಧಾರವಾಡ, ರವೀಶ್ ಸಿ ಆರ್ ಡಿ.ಸಿ.ಪಿ (ಅವಸಂ) ಹಾಗೂ  ಬಿ ಎಸ್ ಬಸವರಾಜ ಎಸಿಪಿ ಧಾರವಾಡ ಶಹರ ಉಪವಿಭಾಗ ಇವರುಗಳ ಮಾರ್ಗದರ್ಶನದಲ್ಲಿ

ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಇವರ ನೇತೃತ್ವದಲ್ಲಿ ಚಂದ್ರಶೇಖರ ಮದರಖಂಡಿ ಪಿ.ಎಸ್.ಐ ಮತ್ತು ಸ್ವಾತಿ ಮುರಾರಿ ಪಿ.ಎಸ್.ಐ ಹಾಗೂ ಸಿಬ್ಬಂದಿ ಜನರಾದ ಡಿ.ವಿ.ಪಾಳರೆಡ್ಡಿ, ಎಮ್.ಬಿ.ಗದ್ದಿಕೇರಿ ಎನ್.ಹೆಚ್.ಗುಡಿಮನಿ, ಜಿ.ಜಿ.ಚಿಕ್ಕಮಠ.

ಎಮ್.ಎಸ್.ಚಿಕ್ಕಮಠ. ಆರ್.ಕೆ.ಭಡಂಕರ, ಆ‌ರ್.ಎಸ್.ಗೋಮಪ್ಪನವರ ಟೀಮ್ 4 ಜನ ಆರೋಪಿತರಿಗೆ ದಸ್ತಗೀರ ಮಾಡಿ ಅವರಿಂದ ಅಂದಾಜು 5.50.000/- ರೂ ಕಿಮ್ಮತ್ತಿನ ಒಟ್ಟು 100 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಅಂದಾಜು 10.500/- ರೂ ಕಿಮ್ಮತ್ತಿನ 150 ಗ್ರಾಂ ತೂಕದ ಬೆಳ್ಳಿಯ ಆಭರಣಗಳ ಹೀಗೆ 5.60,500/- ರೂ ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡಿದ್ದಾರೆ

ಇವುಗಳಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆಯ 1 ಪ್ರಕರಣ ಹಾಗೂ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ 1 ಪ್ರಕರಣ ಹೀಗೆ ಒಟ್ಟು 2 ಪ್ರಕರಣಗಳು ಪತ್ತೆಯಾಗಿದ್ದು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ಸದರಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿರುತ್ತಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.