ಬಾಗಲಕೋಟೆ –
ಪಟ್ಟಣ ಪಂಚಾಯತಿ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿದ್ದ ದಂಪತಿಗಳು ಗೆಲುವು ಸಾಧಿಸಿದ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ.ಹೌದು ನಿನ್ನೆ ಕಮತಗಿ ಪಟ್ಟಣ ಪಂಚಾ ಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ದಂಪತಿ ಇಬ್ಬರೂ ಆಯ್ಕೆಯಾಗುವ ಮೂಲಕ ಗಮನ ಸೆಳೆಸಿದ್ದಾರೆ 7ನೇ ವಾರ್ಡ್ ನಿಂದ ದೇವಿಪ್ರಸಾದ ನಿಂಬಲಗುಂದಿ ಹಾಗೂ ಇವರ ಪತ್ನಿ ನೇತ್ರವಾತಿ 15ನೇ ವಾರ್ಡ್ ನಿಂದ ಚುನಾವ ಣೆಗೆ ಸ್ಪರ್ಧಿಸಿದ್ದರು.ನೇತ್ರಾವತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿದ್ದರು.ದೇವಿಪ್ರಸಾದಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಹಾಗಾಗಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಅಖಾಡಕ್ಕೆ ಇಳಿದಿದ್ದರು.ಪತಿ ಮತ್ತು ಪತ್ನಿ ಇಬ್ಬರಿಗೂ ಮತದಾರರು ಜೈ ಎಂದಿದ್ದಾರೆ.
ನೇತ್ರಾವತಿ 441 ಮತ ಪಡೆದು 177 ಮತಗಳ ಅಂತರ ದಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದಾರೆ.ದೇವಿಪ್ರಸಾದ 148 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.ಒಟ್ಟು 16 ಸ್ಥಾನಗಳ ಪೈಕಿ ಕಾಂಗ್ರೆಸ್ 11 ಸ್ಥಾನ ಪಡೆದಿದ್ದು ಇದೀಗ ಪಕ್ಷೇತರ ಅಭ್ಯರ್ಥಿ ದೇವಿಪ್ರಸಾದ ಸಹ ಕಾಂಗ್ರೆಸ್ ಬೆಂಬಲಿಸಲಿದ್ದಾರೆ.