IAS ಅಧಿಕಾರಿ ಬಂಧನ ಬಂಧನದ ಕಾರಣ ಕೇಳಿದರೆ ಶಾಕ್ ಆಗುತ್ತೆ…..

Suddi Sante Desk

ನವದೆಹಲಿ –

ಜಾರ್ಜಂಡ್ ಐಎಎಸ್ ಮಹಿಳಾ ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಬಂಧನಕ್ಕೂ ಮುನ್ನ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.ಜಾರಿ ನಿರ್ದೇಶನಾಲ ಯ ಕಳೆದ ಶುಕ್ರವಾರ ಜಾರ್ಖಂಡ್ ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಮತ್ತು ಅವರ ಕುಟುಂಬ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತು ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಖುಂಟಿ ಜಿಲ್ಲೆಯಲ್ಲಿ ಸುಮಾರು 18 ಕೋಟಿ MGNREGA ನಿಧಿಯನ್ನು ದುರುಪಯೋಗಪಡಿಸಿ ಕೊಂಡ ಆರೋಪ ಅವರ ಮೇಲಿದೆ  ರಾಜ್ಯ ರಾಜಧಾನಿ ರಾಂಚಿಯಲ್ಲಿ ತಪಾಸಣೆ ನಡೆಸಿದ ಸಂಸ್ಥೆಯು ಎರಡು ಸ್ಥಳಗಳಿಂದ ಒಟ್ಟು 19.31 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.

ಐಎಎಸ್ ಅಧಿಕಾರಿ ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕ ಹೊಂದಿರುವ ರಾಂಚಿ ಮೂಲದ ಚಾರ್ಟರ್ಡ್ ಅಕೌಂಟೆಂಟ್-ಕಮ್-ಫೈನಾನ್ಷಿಯಲ್ ಅಡ್ವೈಸರ್ ಅವರ ಆವರಣದಿಂದ ಸುಮಾರು 17.51 ಕೋಟಿ ರೂಪಾಯಿಗ ಳನ್ನು ವಶಪಡಿಸಿಕೊಳ್ಳಲಾಗಿದೆ.ನಗರದ ಮತ್ತೊಂದು ಸ್ಥಳದಿಂದ ಸುಮಾರು 1.8 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿ ಈ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಈ ಪ್ರಕರಣ ಜಾರ್ಖಂಡ್‌ ನಲ್ಲಿ ಕೋಟ್ಯಂತರ ಎಂಜಿಎನ್‌ಆರ್‌ಇಜಿಎ ನಿಧಿಯ ದುರುಪಯೋಗ ಒಳ ಗೊಂಡಿರುತ್ತದೆ.ಪೂಜಾ ಸಿಂಘಾಲ್ ಅವರು ಜಾರ್ಖಂಡ್‌ ನಲ್ಲಿ ಗಣಿಗಾರಿಕೆ ಕಾರ್ಯದರ್ಶಿಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.