ನವದೆಹಲಿ –
7ನೇ ವೇತನ ಆಯೋಗದ ವಿಚಾರದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಯೊಂದು ಸಿಕ್ಕಿದೆ ಹೌದು ಬುಧವಾರ ಕೇಂದ್ರ ಸಂಚಿವ ಸಂಪುಟ ಸಭೆ ಡಿಎ ಹೆಚ್ಚಳ ಬಗ್ಗೆ ತೀರ್ಮಾನವಾಗಲಿದ್ದು ಅಧಿಕೃತ ಮಾಹಿತಿ ಹೊರಬೀಳಲಿದೆ
ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ಯೊಂದು ಹೊರ ಬಿದ್ದಿದೆ ಏಳನೇ ವೇತನ ಆಯೋಗದಡಿ ತುಟ್ಟಿ ಭತ್ಯೆ (DA) ಹೆಚ್ಚಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬುಧವಾರ ಅಧಿಕೃತ ಮಾಹಿತಿ ಪ್ರಕಟಗೊಳ್ಳಲಿದೆ.
7ನೇ ವೇತನ ಆಯೋಗದಡಿ ತುಟ್ಟಿ ಭತ್ಯೆ (ಡಿಎ) ಏರಿಕೆಯ ಜನವರಿ ತಿಂಗಳ ಪರಿಷ್ಕರಣೆ ಕುರಿತು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಇದೇ ಮಾರ್ಚ್ 15 ರಂದು ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.ಅದರಲ್ಲಿ ಬಗ್ಗೆ ನಿರ್ಧರಿಸಲಿದೆ. ಆ ಬಳಿಕವೇ ಒಂದಷ್ಟು ಅಧಿಕೃತ ಮಾಹಿತಿಯು ಬಹಿರಂಗಗೊಳ್ಳಲಿವೆ ಎಂದು ತಿಳಿದು ಬಂದಿದೆ.
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ದ ಸಂಖ್ಯೆ ಕಳೆದ ಜನವರಿಗೆ (2023) 132.8ಗೆ ಪಾಯಿಂಟ್ಸ್ ಏರಿಕೆ ಆಗಿದೆ. ಅದಾಗಿ ಒಂದು ತಿಂಗಳ ಅಂತರದಲ್ಲಿ ಆದ ಬದಲಾವಣೆಯಿಂದ ಎಐಸಿಪಿಐ 0.38 ಪ್ರತಿಶತದಷ್ಟು ಹೆಚ್ಚಾಗಿರು ವುದು ಕಂಡು ಬಂದಿದೆ.
ಇದೆಲ್ಲದರೆ ಜೊತೆಗೆ ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡುವ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಸಂಖ್ಯೆಗಳು ನಿರೀಕ್ಷಿತ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಸೂಚಿಸುತ್ತದೆ.
ಸದ್ಯ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಬೇಡಿಕೆಯಾದ ಡಿಎ ಏರಿಕೆ ಸಮಸ್ಯೆಗೆ ಪರಿಹಾರ ಸಿಗಿದ್ದರೆ ಮತ್ತೆ ಇದೇ ತಿಂಗಳ ಮಾರ್ಚ್ 31 ಫೆಬ್ರವರಿ ತಿಂಗಳಿಗೆ ಸರಿಹೊಂದು ವಂತೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI)ದ ಸಂಖ್ಯೆ ಪ್ರಕಟಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ.
ತುಟ್ಟಿಭತ್ಯೆ ಶೇ.3ರಷ್ಟು ಏರಿಕೆಯಾಗಲಿದೆ ಅದರಂತೆ ಹೆಚ್ಚಳವಾದ್ಲಲಿ ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 38 ರಿಂದ ಶೇಕಡಾ 41ಕ್ಕೆ ಹೆಚ್ಚಾಗುತ್ತದೆ. ಈ ಕುರಿತು ಅಂಶಗಳು ಮುಂದಿವೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..