ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯವನ್ನು ನಿರ್ವ ಹಿಸುತ್ತಿರುವ ಸೇವಾನಿರತ ಪದವಿಧರ ಶಿಕ್ಷಕರಿಗೆ ಅನ್ಯಾಯ ಆಗುತ್ತಿರುವ ಕುರಿತಂತೆ ರಾಜ್ಯ ವ್ಯಾಪಿ ಕರೆ ನೀಡಿರುವ ಸಾಂಕೇತಿಕ ಪ್ರತಿಭಟನೆಗೆ ರಾಜ್ಯದ ತುಂಬೆಲ್ಲಾ ಅಭೂತಪೂರ್ಣವಾದ ಬೆಂಬಲ ಕಂಡು ಬಂದಿದೆ. ಈ ಒಂದು ಹೋರಾಟವನ್ನು ಬೆಂಬಲಿಸಿ ರಾಜ್ಯದ ತುಂಬೆಲ್ಲಾ ಸೇವಾ ನಿರತ ಪದವೀಧರರ ಶಿಕ್ಷಕರು ಪ್ರತಿಭಟನೆ ನಡೆಸಿ ಮನವಿ ನೀಡಿದರು.

ಬಾಗಲಕೋಟೆ ಯಲ್ಲಿ ಹೋರಾಟ ಕರ್ನಾಟಕ ರಾಜ್ಯ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬಾಗಲಕೋಟೆ

ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಿದ ಶಿಕ್ಷಕರು 6 ರಿಂದ 8 ನೇ ತರಗತಿ ಬಹಿಷ್ಕಾರ ಕುರಿತು ಮಾನ್ಯ ಉಪನಿರ್ದೇಶಕರು ಬಾಗಲಕೋಟೆ ಇವರಿಗೆ ಮನವಿ ಯನ್ನು ಸಲ್ಲಿಸಿದರು.ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ರಾದ B.G. ಗೌಡರ ಸಹ ಕಾರ್ಯದರ್ಶಿಗಳಾ ಚಂದ್ರ ಅರಿಸಿಕೇರಿ.ಮುತ್ತು ಬಳ್ಳಾ ಜಿಲ್ಲಾ ಉಪಾಧ್ಯಕ್ಷರಾದ ರಮೇಶ,ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಂ.ಬಿ.ಪ್ರಧಾನ ಕಾರ್ಯದರ್ಶಿ ಅಶೋಕ ದೊಡಮ ನಿ ತಾಲೂಕ ಖಜಾಂಚಿ ರಾಜೇಶ ಹೊಸಗೌಡ್ರ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯದ ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ H.T ಕೊಡ್ಡನ್ನ ವರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪದಾಧಿಕಾರಿ ಗಳಾದ ಶ್ರೀಮತಿ ಎಸ್.ಎಚ್.ಕಂದಗಲ್ಲ ಶ್ರೀಮತಿ ನಿರ್ಮಲಾ ಪತ್ತಾರ ಹಾಜರು ಇದ್ದರು.ಈ ಸಮಯ ದಲ್ಲಿ ಜಿಲ್ಲಾಧ್ಯಕ್ಷರು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.

ಶಿರಸಿ ಯಲ್ಲೂ ಪ್ರತಿಭಟನೆ ಮನವಿ
ಇತ್ತ ಶಿರಸಿ ಯಲ್ಲೂ ಕೂಡಾ ಸೇವಾ ನಿರತ ಪದವೀ ಧರ ಶಿಕ್ಷಕರಿಂದ ಮನವಿ ನೀಡಲಾಯಿತು ಉಪನಿ ರ್ದೇಶಕರ ಕಚೇರಿ ಶಿರಸಿಯಲ್ಲಿ ಹಿರಿಯ ಅಧಿಕಾರಿ ಗಳಾದ ಸಿ ಎಸ್ ನಾಯ್ಕ ಸಮನ್ವಯಾಧಿಕಾರಿ ಗಳು RMSA ರವರಿಗೆ ಮನವಿಯನ್ನು ನೀಡಲಾಯಿತು. ನಮ್ಮ ಮನವಿಗೆ ಸಂಪೂರ್ಣವಾಗಿ ಸ್ಪಂದಿಸಿ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ರು,ಪ್ರಧಾನ ಕಾರ್ಯದರ್ಶಿಗಳು,ಸರ್ವ ಪದಾಧಿ ಕಾರಿಗಳು, ಜಿಲ್ಲಾ ಪದವೀಧರ ಶಿಕ್ಷಕರ ಸಂಘ.ಶಿರಸಿ ಶೈಕ್ಷಣಿಕ ಜಿಲ್ಲೆ ಇವರ ಪಾಲ್ಗೊಂಡಿದ್ದರು.

ಗಜೇದ್ರಗಡ ದಲ್ಲೂ ಪ್ರತಿಭಟನೆ ಮನವಿ
ಇತ್ತ ಗದಗ ಜಿಲ್ಲೆಯ ಗಜೇಂದ್ರಗಡ ದಲ್ಲೂ ಸೇವಾ ನಿರತ ಪದವೀಧರ ಶಿಕ್ಷಕರು ಪ್ರತಿಭಟನೆ ಮಾಡಿ ಮನವಿಯನ್ನು ನೀಡಿದರು. ತಾಲ್ಲೂಕು ಘಟಕದಿಂದ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ನೀಡಿದ ರು.ಈ ಒಂದು ಮನವಿ ನೀಡುವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಲವು ಶಿಕ್ಷಕರು ಪಾಲ್ಗೊಂಡಿದ್ದರು.
ಹಾಸನ ದಲ್ಲೂ ಪ್ರತಿಭಟನೆ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ(ರಿ) ಜಿಲ್ಲಾ ಘಟಕ ಹಾಸನ ಹಾಗೂ ತಾಲ್ಲೂಕು ಘಟಕಗಳ ನೇತ್ರತ್ವದಲ್ಲಿ ಪ್ರತಿಭಟನೆ
ಹಾಸನ ಜಿಲ್ಲೆಯಲ್ಲೂ ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕ ಬಂಧುಗಳಿಂದ ಪ್ರತಿಭಟ ನೆ ಮಾಡಿ ಮನವಿಯನ್ನು ನೀಡಲಾಯಿತು.1 ರಿಂದ 7 ನೇ ತರಗತಿಗೆ ನೇಮಕಾತಿ ಹೊಂದಿ ಬೋಧಿಸು ತ್ತಿದ್ದ ನಮಗೆ 1-5 ನೇ ತರಗತಿಗಳಿಗೆ ಸೀಮಿತಗೊಳಿಸಿ ನೀಡಿರುವ ಹಿಂಬಡ್ತಿಯನ್ನು ವಿರೋಧಿಸಿ ಉಪನಿ ರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಗಳ ಮುಂದೆ ಪ್ರತಿಭಟನೆ ಮಾಡಿ ಮನವಿಯನ್ನು ನೀಡಲಾಯಿತು. ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿ ರ್ವಹಿಸುತ್ತಿರುವ ಸೇವಾನಿರತ ಪದವೀಧರ ಶಿಕ್ಷಕರ ಹಕ್ಕು ಹಾಗೂ ಅಸ್ತಿತ್ವಕ್ಕಾಗಿ ಹೋರಾಟ ಮಾಡಿ ಮನವಿಯನ್ನು ನೀಡಲಾಯಿತು.ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ. ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ,NPS ಶಿಕ್ಷಕರ ಸಂಘದ,ಹಾಸನ ಜಿಲ್ಲಾ ಮತ್ತು ತಾಲೂಕು ಘಟಕ ಗಳ ಸರ್ವ ಗೌರವಾನ್ವಿತ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪಾಲ್ಗೊಂಡಿದ್ದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ(ರಿ) ಜಿಲ್ಲಾ ಘಟಕ ಹಾಸನ ಹಾಗೂ ಎಲ್ಲಾ ತಾಲೂಕು ಘಟಕಗಳು ಮುಖಂಡರು ಸರ್ವ ಸದಸ್ಯರು ಈ ಒಂದು ಹೋರಾಟದಲ್ಲಿ ಪಾಲ್ಗೊಂ ಡಿದ್ದು ಕಂಡು ಬಂದಿತು.