ಬೆಂಗಳೂರು –
ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೇಕ್ಟರ್,PSI – ಆರೋಪಿ ಬಿಡುಗಡೆ ಮಾಡಲು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದವರು ಟ್ರ್ಯಾಪ್ ಪ್ರಕರಣವೊಂದರಲ್ಲಿ ಬಂಧನವಾಗಿದ್ದ ಆರೋಪಿ ಯನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್ಸ್ಪೇಕ್ಟರ್ ,ಪಿಎಸ್ಐ ಸೇರಿದಂತೆ ಪೊಲೀಸ್ ಪೇದೆ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ.
5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಪೈನಲ್ ಆಗಿ 3 ಲಕ್ಷ ರೂಪಾಯಿ ಲಂಚವನ್ನು ತಗೆದುಕೊಳ್ಳು ವಾಗ ಇನ್ಸ್ಪೆಕ್ಟರ್ ,ಪಿಎಸ್‌ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿಯನ್ನು ಬಿಡುಗಡೆ ಮಾಡಲು ₹3 ಲಕ್ಷಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಕೆ.ಆರ್.ಪುರ ಠಾಣೆಯ ಇನ್ಸ್ಪೆಕ್ಟರ್ ಕೆ. ವಜ್ರಮುನಿ ಹಾಗೂ ಪಿಎಸ್‌ಐ ಎನ್. ರಮ್ಯಾ ಲೋಕಾಯಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಂಚನೆಗೆ ಸಂಬಂಧಪಟ್ಟಂತೆ ಕೆ.ಆರ್.ಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾ ಗಲೇ ಆರೋಪಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದ ಪೊಲೀಸರು ಠಾಣೆಯಲ್ಲಿ ಇರಿಸಿ ಕೊಂಡಿದ್ದರಂತೆ.
ಠಾಣೆಯಿಂದ ಬಿಟ್ಟು ಕಳುಹಿಸಲು ₹3 ಲಕ್ಷ ನೀಡುವಂತೆ ಪಿಎಸ್‌ಐ ಮೂಲಕ ಇನ್‌ಸ್ಪೆಕ್ಟರ್ ಬೇಡಿಕೆ ಇರಿಸಿದ್ದರು.ಇದು ಗೊತ್ತಾಗುತ್ತಿದ್ದಂತೆ ಆರೋಪಿ ಪರ ವಕೀಲ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಮಹಿಳಾ ಪಿಎಸ್‌ಐ ರಮ್ಯಾ ಹಾಗೂ ಇನ್ಸ್ಪೆಕ್ಟರ್ ವಜ್ರಮುನಿ ಅವರು ತಲಾ ₹50 ಸಾವಿರ ಪಡೆದುಕೊಂಡಿ ದ್ದರು
ಇದೇ ಸಂದರ್ಭದಲ್ಲಿ ದಾಳಿ ಮಾಡಿ ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಇವರೊಂದಿಗೆ ಒರ್ವ ಪೊಲೀಸ್ ಪೇದೆಯನ್ನು ವಶಕ್ಕೆ ಪಡೆದುಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..