ಉಗ್ರ ಸಂಘಟನೆಗಳ ಗೋಡೆ ಬರಹ –ಗೋಡೆ ಬರಹಕ್ಕೇ ಬಣ್ಣ ಹಚ್ಚಿದ ಕದ್ರಿ ಪೊಲೀಸರು

Suddi Sante Desk

ಮಂಗಳೂರು –

ಶಾಂತವಾಗಿದ್ದ ರಾಜ್ಯದಲ್ಲಿ ಉಗ್ರ ಸಂಘಟನೆಗಳ ಹೆಸರಿನಲ್ಲಿ ಕಿತಾಪತಿ ಕೆಲಸ ಮತ್ತೇ ಕಂಡು ಬಂದಿದೆ. ಹೌದು ಮಂಗಳೂರಿನಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹಗಳನ್ನು ಬರೆಯಲಾಗಿದೆ. ಉಗ್ರ ಸಂಘಟೆಗಳ ಪರ ಗೋಡೆ ಬರಹಗಳನ್ನು ಬರೆದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ ದುಷ್ಕರ್ಮಿಗಳು.

‘ಲಷ್ಕರ್ ಜಿಂದಾಬಾದ್’ ಬರಹವನ್ನು ಕದ್ರಿಯ ಅಪಾರ್ಟ್ಮೆಂಟ್ ಒಂದರ ಕಾಂಪೌಂಡ್ ಗೋಡೆಯಲ್ಲಿ ಬರೆಯಲಾಗಿದೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಗೋಡೆಗೆ ಈ ಒಂದು ಬರಹವನ್ನು ಬರೆಯಲಾಗಿದ್ದು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ.

Do not force us to invite Lashkar-e-Toiba and Taliban to Deal with Sanghis and Manvedis ಹೀಗೆ ಬರೆದು ಲಷ್ಕರ್ ಜಿಂದಾಬಾದ್ ಹ್ಯಾಷ್ ಟ್ಯಾಗ್ ಹಾಕಿದ್ದಾರೆ ಕಿಡಿಗೇಡಿಗಳು.ಇನ್ನೂ ಈ ಒಂದು ಗೋಡೆ ಬರಹದ ಸುದ್ದಿ ತಿಳಿದ ಕದ್ರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದ್ರು.ಅಪಾರ್ಟ್ ಮೆಂಟ್ ಸುತ್ತ ಮುತ್ತಲಿರುವ ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಮಾಡ್ತಿದ್ದಾರೆ.ಇನ್ನೂ ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಇನ್ನೂ ಇತ್ತ ಗೋಡೆ ಬರಹಕ್ಕೇ ಬಣ್ಣವನ್ನು ಬಡೆದಿದ್ದಾರೆ ಕದ್ರಿ ಠಾಣೆ ಪೊಲೀಸರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.