ನವದೆಹಲಿ –
ಕರೋನ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಕೇಂದ್ರ ಸರ್ಕಾರ ಭರ್ಜರಿಯಾದ ಸಿಹಿ ಸುದ್ದಿಯೊಂದನ್ನು ನೀಡಿದೆ.ಹೌದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತಾ ಪ್ರಮಾಣಪತ್ರಗಳ ಸಿಂಧುತ್ವವನ್ನು ಏಳು ವರ್ಷಗಳಿಂದ ಜೀವಿತಾವಧಿಗೆ ವಿಸ್ತರಿಸಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಶಿಕ್ಷಕರ ಅರ್ಹತಾ ಪರೀಕ್ಷಾ ಪ್ರಮಾಣಪತ್ರಗಳ ಸಿಂಧುತ್ವದ ಅವಧಿಯನ್ನು 2021 ರಿಂದ ಪೂರ್ವಾ ನ್ವಯ ಪರಿಣಾಮದೊಂದಿಗೆ ಏಳು ವರ್ಷಗಳಿಂದ ಜೀವಿತಾವಧಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ಇನ್ನೂ ಪ್ರಮುಖವಾಗಿ ಈ ಹಿಂದೆ ಏಳು ವರ್ಷಗಳ ಅವಧಿ ಈಗಾಗಲೇ ಮುಗಿದಿರುವ ಅಭ್ಯರ್ಥಿಗಳಿಗೆ ಮರು ಮೌಲ್ಯೀಕರಿಸಲು ಮತ್ತು ಹೊಸ ಟಿಇಟಿ ಪ್ರಮಾಣ ಪತ್ರಗಳನ್ನು ನೀಡಲು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪಕ್ಷಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತವೆ ಎಂದು ಅವರು ಹೇಳಿದರು.ಇದರೊಂದಿಗೆ ಮುಖ್ಯವಾಗಿ ಬೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ವನ್ನು ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸ ಲು ಇದು ಸಕಾರಾತ್ಮಕ ಹೆಜ್ಜೆಯಾಗಲಿದೆ ಎಂದು ಪೊಖ್ರಿಯಾಲ್ ಹೇಳಿದರು.
ಟಿಇಟಿ ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿರು ವುದು ಒಬ್ಬ ವ್ಯಕ್ತಿಯು ಶಾಲಾ ಶಿಕ್ಷಕರಾಗಿ ನೇಮಕಾ ತಿಗೆ ಅರ್ಹರಾಗಲು ಅತ್ಯಗತ್ಯ ಅರ್ಹತೆಗಳಲ್ಲಿ ಒಂದಾ ಗಿದೆ.ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್ ಸಿಟಿಇ) ಫೆಬ್ರವರಿ 11, 2011 ರ ಮಾರ್ಗಸೂಚಿಗಳು ಟಿಇಟಿಯನ್ನು ರಾಜ್ಯ ಸರ್ಕಾರಗಳು ನಡೆಸುತ್ತವೆ ಮತ್ತು ಟಿಇಟಿ ಪ್ರಮಾಣಪತ್ರಗಳ ಸಿಂಧುತ್ವವು ಟಿಇಟಿ ಯನ್ನು ಅಂಗೀಕರಿಸಿದ ದಿನಾಂಕದಿಂದ ಏಳು ವರ್ಷಗಳಾಗಿತ್ತು ಎಂಬುದನ್ನು ಗಮನಿಸಬಹುದು
ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತಾ ಪ್ರಮಾಣಪತ್ರಗಳ ಸಿಂಧುತ್ವವನ್ನು ಏಳು ವರ್ಷಗಳಿಂ ದ ಜೀವಿತಾವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಗುರುವಾರ ಘೋಷಿಸಿದ್ದಾರೆ
ಇನ್ನೂ ಕೇಂದ್ರ ಸರ್ಕಾರದ ಈ ಒಂದು ನಿರ್ಧಾರ ವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿ ಕೇಂದ್ರ ಸರ್ಕಾರಕ್ಕೆ ಮತ್ತು ಶಿಕ್ಷಣ ಸಚಿವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಸರ್ವ ಸದಸ್ಯರು ಧನ್ಯವಾದಗಳನ್ನು ಹೇಳಿದ್ದಾರೆ