ಬೆಂಗಳೂರು –
ಸಧ್ಯ ರಾಜ್ಯದಲ್ಲಿ ತುಂಬಾ ತುಂಬಾ ಹೆಚ್ಚಿನ ಪ್ರಮಾಣ ದಲ್ಲಿ ಸಂಕಷ್ಟದ ಪರಸ್ಥಿತಿ ನಿರ್ಮಾಣವಾಗಿದೆ.ಇಂಥ ಹ ಪರಸ್ಥಿತಿಯಲ್ಲಿ ಇದನ್ನು ನಿಯಂತ್ರಣ ಮಾಡಲು ವಿವಿಧ ಇಲಾಖೆಯ ಸಿಬ್ಬಂದಿಗಳೊಂದಿಗೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಕರ್ತವ್ಯಕ್ಕೆ ನೇಮಕ ಮಾಡಿ ದ ರಾಜ್ಯದ ಎಲ್ಲಾ ಶಿಕ್ಷಕರಿಗೆ ಸೂಕ್ತವಾದ ಸೌಲಭ್ಯ ಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿ ಕ ಶಾಲಾ ಶಿಕ್ಷಕರ ಸಂಘ ಒತ್ತಾಯ ಮಾಡಿದೆ.

ಈ ಒಂದು ವಿಚಾರ ಕುರಿತಿ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಪ್ರಧಾನ ಕಾರ್ಯದ ರ್ಶಿ ಚಂದ್ರಶೇಖರ ನುಗ್ಗಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಒತ್ತಾಯವನ್ನು ಮಾಡಿದ್ದಾರೆ.

ಈ ಕುರಿತಂತೆ ಪತ್ರವೊಂದನ್ನು ಬರೆದಿದ್ದು ಪ್ರಮುಖ ವಾಗಿ ಕೋವಿಡ್ ಕರ್ತವ್ಯಕ್ಕೆ ನೇಮಕಗೊಂಡಿರುವ ರಾಜ್ಯದ ಶಿಕ್ಷಕರಿಗೆ ಸೂಕ್ತ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಿ ಕೊಡಬೇಕು.ಉಚಿತ ಲಸಿಕೆಯ ನೀಡುವಂತ ಹ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ

ಹಾಗೇ ಪ್ರಮುಖವಾಗಿ 55 ವಯಸ್ಸಿನ ವಿವಿಧ ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಿರುವ ಪುರುಷ ಮತ್ತು ಮಹಿಳೆಯರು ಹಾಗೇ ಗರ್ಭಿಣಿ ಮಹಿಳೆಯ ರು ಚಿಕ್ಕ ಚಿಕ್ಕ ಮಕ್ಕಳಿರುವ ಮಹಿಳಾ ನೌಕರರನ್ನು ಕರ್ತವ್ಯದಿಂದ ಕೈಬಿಡುವಂತೆ ಒತ್ತಾಯ ಮಾಡಿದ್ದಾರೆ

ಈ ಕೂಡಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ಸೂಕ್ತವಾದ ನಿರ್ದೇಶನವನ್ನು ನೀಡುವಂ ತೆ ಒತ್ತಾಯ ಮಾಡಿದ್ದಾರೆ ಇದರೊಂದಿಗೆ ಸಂಘವು ಶಿಕ್ಷಕರ ಹಿತಕ್ಕೆ ಮುಂದಾಗಿದೆ