ಧಾರವಾಡ –
ರಾಜ್ಯದಲ್ಲಿನ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಲು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವದಲ್ಲಿ ಬೆಂಗಳೂರಿ ನಲ್ಲಿಂದ ಮಹತ್ವದ ನಿರ್ಣಾಯಕ ಸಭೆ ನಡೆಯಲಿದ್ದು ಈಗಾಗಲೇ ಈ ಒಂದು ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಇನ್ನೂ ಇವೆಲ್ಲದರ ನಡುವೆ ಷಡಾಕ್ಷರಿ ಅವರು ಕರೆದ ಈ ಒಂದು ಸಭೆಗೆ ನಾಡಿನ ಶಿಕ್ಷಕರು ಅತ್ಯಂತ ಉತ್ಸಾಹದಿಂದ ಬೆಂಬಲವನ್ನು ನೀಡಿದ್ದು ಇನ್ನೂ ಇವೆಲ್ಲದರ ನಡುವೆ ಧಾರವಾಡದ ಶಿಕ್ಷಕರ ಸಂಘಗಳ ಪರಿಷತ್ತಿನ ಗುರು ತಿಗಡಿ ಮತ್ತು ಟೀಮ್ ನವರು ಕೂಡಾ ಪಾಲ್ಗೊಂಡಿದ್ದಾರೆ.



ಈಗಾಗಲೇ ಪರಿಷತ್ತಿನ 20 ಕ್ಕೂ ಹೆಚ್ಚು ಬಂಧುಗಳು ಬೆಂಗಳೂರಿನಲ್ಲಿದ್ದು ಶಕ್ತಿ ಪ್ರದರ್ಶನಕ್ಕೆ ಸಿದ್ದರಾಗಿ ಅಖಾಡಕ್ಕೆ ತೆರಳಿದರು.ಗುರು ತಿಗಡಿ ನೇತ್ರತ್ವದಲ್ಲಿನ ಸರ್ವ ಸದಸ್ಯರು ಸರ್ಕಾರಿ ನೌಕರರ ಭವನ ಸೇರಿದಂತೆ ಹಲವೆಡೆ ಒಂದು ಸುತ್ತು ಹಾಕಿ ಶಕ್ತಿ ಪ್ರದರ್ಶನದೊಂದಿಗೆ ಸಭೆ ನಡೆಯುವ ಸ್ಥಳದತ್ತ ತೆರಳಿದರು. ಕಳೆದ ಹಲವಾರು ವರ್ಷಗಳಿಂದ ಜ್ವಲಂತ ಸಮಸ್ಯೆಗಳಲ್ಲಿ ಸಿಕ್ಕು ಒದ್ದಾಡುತ್ತಿರುವ ಶಿಕ್ಷಕರ ಸಮಸ್ಯೆಗಳನ್ನು ಸಭೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಿ ದ್ದಾರೆ ಗುರು ತಿಗಡಿ ಮತ್ತು ಟೀಮ್ ನವರು.



ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಧಾರವಾಡದ ಶಿಕ್ಷಕರ ಸಂಘಟ ನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಈ ಒಂದು ಸಮಯದಲ್ಲಿ ಗುರು ತಿಗಡಿ,ಶಂಕರ್ ಗಟ್ಟಿ,ಗುರು ಪೋಳ, ಕಾಶಪ್ಪ ದೊಡವಾಡ, ಅಕ್ಬರ್ ಅಲಿ ಸೋಲಾಪುರ್, ಆರ್ ಎಸ್ ಹಿರೇಗೌಡರ್, ಎಸ್ ಬಿ ಶಿವಶಿಂಪಿ.ಚಂದ್ರಶೇಖರ ತಿಗಡಿ,ನಾರಾಯಣ ಭಜಂತ್ರಿ, ಎಸ್ಎಂ ಮೆಣಸಿನಕಾಯಿ, ಆಶಾ ಬೇಗ ಮುನವಳ್ಳಿ ಮಹಾದೇವಿ ದೊಡ್ಡಮನಿ ಸೇರಿದಂತೆ ಹಲವರು ಟೀಮ್ ನಲ್ಲಿದ್ದಾರೆ.