ಚಿಂಚೋಳಿ –
ವೇತನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚಿಂಚೊಳ್ಳಿ ಯಲ್ಲಿ ಅಡುಗೆ ಸಿಬ್ಬಂದಿ ಪ್ರತಿಭಟನೆ ಮಾಡಿ ದರು ಹೌದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಅಡುಗೆಯವರು ಅಡುಗೆ ಸಹಾಯಕರು,ರಾತ್ರಿ ಕಾವಲು ಗಾರರ ಹೊರ ಸಂಪನ್ಮೂಲ ಸಂಸ್ಥೆಯ ಸಿಬ್ಬಂದಿಗಳ ಸಂಬಳ ಪಾವತಿಸುವಂತೆ ತಾಪಂ ಕಚೇರಿ ಎದುರು ಮಳೆ ಯಲ್ಲಿಯೇ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಹೊರ ಸಂಪನ್ಮೂಲ ಸಿಬ್ಬಂದಿಯಾಗಿ ಅಡುಗೆ ಸಹಾಯಕರು,ಅಡುಗೆಯವರು ಕೆಲಸ ಮಾಡುತ್ತಿ ದ್ದಾರೆ.ಅವರಿಗೆ ತಿಂಗಳ 5ನೇ ತಾರಿಖೀನ ಒಳಗಾಗಿ ವೇತನ ಸರಿಯಾಗಿ ಕೊಡುತ್ತೇವೆ ಎಂದು ಸಂಸ್ಥೆಯವರು ಸಮಾಜ ಕಲ್ಯಾಣ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.ಆದರೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವೇಳೆ ಅಡುಗೆಯವರು ಹಾಸ್ಟೆಲ್‌ಗಳಿಗೆ ಹಾಜರಾಗಿ ಅಡುಗೆ ಮಾಡದೇ ಇದ್ದರೆ ಮಕ್ಕಳು ಉಪವಾಸ ಇರುತ್ತಾರೆ ಎನ್ನುವ ಉದ್ದೇಶದಿಂದ ಅವರು ಮಳೆ,ಚಳಿ,ಬಿಸಿಲು ಎನ್ನದೇ ಅಡುಗೆ ಮಾಡುತ್ತಿದ್ದಾರೆ.ಆದ್ದರಿಂದ ಕೂಡಲೇ ಅವರ ಐದು ತಿಂಗಳ ವೇತನ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದರು ಎಲ್ಲ ಸಿಬ್ಬಂದಿಯೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಾಪಂ ಇಒ ಹಂಪಣ್ಣ ವೈ.ಎಲ್.ಗೆ ಸಲ್ಲಿಸಲಾಯಿತು.ತಾಪಂ ಸಿಬ್ಬಂದಿ ನಾಗೇಂದ್ರಪ್ಪ ಸುಲೇಪೇಟ,ಲಕ್ಷ್ಮಣ ರಾಠೊಡ, ವಿಜಯ ಕುಮಾರ ದಸ್ತಾಪುರ ಇನ್ನಿತರರಿದ್ದರು.ಪ್ರತಿಭಟನೆಯಲ್ಲಿ ಸಿಬ್ಬಂದಿಗಳಾದ ಮಾಪಣ್ಣ,ಜಗನ್ನಾಥ,ಶಾಂತಮ್ಮ ಕಾಮಾಕ್ಷಿ, ಆರತಿ,ಸೈದಾಬಿ,ಮಲಕಮ್ಮ,ಶಾಂತಿಬಾಯಿ,ಸೊನಿಬಾಯಿ, ರೋಹಿತಬಾಯಿ,ಧರ್ಮಿಬಾಯಿ,ಮುಖಂಡರಾದ ರವಿಶಂ ಕರರೆಡ್ಡಿ ಮುತ್ತಂಗಿ,ಸುರೇಂದ್ರ ಶಿವರೆಡ್ಡಿಪಳ್ಳಿ, ವಿಷ್ಣು ಮೂಲಗೆ ಇನ್ನಿತರರಿದ್ದರು.