ಬೆಂಗಳೂರು –
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ಬೆಂಗಳೂರಿನಲ್ಲಿ ನಡೆಯಿತು. ನಗರದ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಯ ಈ ಒಂದು ಸಭೆಯು ರಾಜ್ಯಾಧ್ಯಕ್ಷ ಶುಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ನಡೆದ ಈ ಒಂದು ಮಹತ್ವದ ಸಭೆಯಲ್ಲಿ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಲಾಯಿತು. ರಾಜ್ಯದಲ್ಲಿ ಸಧ್ಯ ಶಿಕ್ಷಕರು ಎದುರಿಸುತ್ತಿರುವ ಹತ್ತು ಹಲವಾರು ಸಮಸ್ಯೆ ವಿಚಾರಗಳ ಕುರಿತಂತೆ ಈ ಒಂದು ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆಯನ್ನು ಮಾಡಲಾಯಿತು.
ಇನ್ನೂ ಇದರೊಂದಿಗೆ ರಾಜ್ಯದಲ್ಲಿ ಸಧ್ಯ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿರುವ ಎನ್ ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಯೋಜನೆ ಜಾರಿಗೊಳಿಸುವ ಕುರಿತಂತೆ ತೀವ್ರವಾದ ಹೋರಾಟ ಪ್ರತಿಭಟನೆಗಳು ನಡೆಯುತ್ತಿದ್ದು ಇದಕ್ಕೆ ಬೆಂಬಲವನ್ನು ನೀಡುವ ಕುರಿತಂತೆ ಕಾರ್ಯಕಾರಣಿ ಸಭೆಯಲ್ಲಿ ನೈತಿಕ ಬೆಂಬಲವನ್ನು ನೀಡಲು ಒಮ್ಮತದ ಬೆಂಬಲವನ್ನು ಘೋಷಣೆ ಮಾಡಲಾಯಿತು.ಇದರೊಂದಿಗೆ ಸಧ್ಯ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ನೌಕರರ ಈ ಒಂದು ಮಹತ್ವದ ಹೋರಾಟಕ್ಕೆ ಮತ್ತೆ ನವಂಬರ್ 19 ರಿಂದ ಬೆಂಗಳೂರಿನಲ್ಲಿ ನಡೆ ಯಲಿರುವ ಅನಿರ್ಧಿಷ್ಟಾವಧಿಯ ಪ್ರತಿಭಟನೆಗೆ ಸಾಥ್ ನೀಡಲು ನಿರ್ಧಾರವನ್ನು ಕೈಗೊಳ್ಳಲಾ ಯಿತು.
ಇದರೊಂದಿಗೆ NPS ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ನಡೆಯುವ ಹೋರಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಕಾರ್ಯ ಕಾರಿ ಸಮಿತಿಯ ಅಭಿಪ್ರಾಯದಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೈತಿಕ ಬೆಂಬಲ ರಾಜ್ಯದ ಎಲ್ಲಾ ಜಿಲ್ಲೆಯ ಅಧ್ಯಕ್ಷರ ಸಮ್ಮುಖದಲ್ಲಿಯೇ ಸಭೆಯಲ್ಲಿ ಬೆಂಬಲವನ್ನು ಘೋಷಿಸಿದರು ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ಅವರು.