ಬೆಂಗಳೂರು –
ಫಲಪ್ರಭ ನೀಡದ ಶಿಕ್ಷಣ ಸಚಿವರ ಸಭೆ – ಬೇಡಿಕೆ ಈಡೇರುವವರೆಗೂ ಹೋರಾಟದ ನಿಶ್ಚಿತವೆಂದ KSPSTA ಟೀಮ್ – ಆಗಸ್ಟ್ 12 ಕ್ಕೆ ಬೆಂಗಳೂರಿ ನಲ್ಲಿ ನಡೆಯಲಿದೆ ರಾಜ್ಯದ ಶಿಕ್ಷಕರ ಶಕ್ತಿ ಪ್ರದರ್ಶನ
ಸೇವಾ ನಿರತ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪೂರ್ವಾನ್ವಯಗೊಳಿಸ ಬಾರದೆಂಬ ಏಕೈಕೆ ಬೇಡಿಕೆ ಮತ್ತು ಹಾಗೂ ಪದವೀಧರ ಶಿಕ್ಷಕರನ್ನು ಪದನಾಮಿಕರಿಸಿ ವಿಲೀನಗೊಳಿಸಬೇಕೆಂಬ ಬೇಡಿಕೆ ಸೇರಿದಂತೆ ಕೆಲವೊಂದಿಷ್ಟು ಬೇಡಿಕೆಗಳ ಕುರಿತಂತೆ ರಾಜ್ಯದ ಶಿಕ್ಷಕರು ಈಗಾಗಲೇ ಆಗಸ್ಟ್ 12 ಕ್ಕೆ ಹೋರಾಟಕ್ಕೆ ಕರೆ ನೀಡಿದ್ದಾರೆ.
ಈ ಒಂದು ಹೋರಾಟದ ಸಂದೇಶದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜ್ಯದ ಶಿಕ್ಷಕರ ಸಂಘಟನೆಯ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಮಾಡಿದರು.ಬೆಂಗಳೂರಿನಲ್ಲಿ ಸಭೆ ಮಾಡಿದ ಸುಧೀರ್ಘವಾಗಿ ಚರ್ಚೆಯನ್ನು ಮಾಡಿ ಶಿಕ್ಷಕರ ಬೇಡಿಕೆಗಳ ಈಡೇರಿಕೆ ಕುರಿತಂತೆ ಯಾವುದೇ ಅಂತಿಮವಾದ ನಿರ್ಧಾರಕ್ಕೆ ಸಚಿವರು ಬರಲಿಲ್ಲ
ಹೀಗಾಗಿ ಅಂತಿಮವಾಗಿ ಈಗಾಗಲೇ ಕರೆ ನೀಡಿರುವ ಆಗಸ್ಟ್ 12 ರ ಹೋರಾಟವನ್ನು ಮಾಡುವುದಾಗಿ ನಿರ್ಧಾರವನ್ನು ತಗೆದುಕೊಂಡು ಅಂದುಕೊಂಡಂತೆ ಘೋಷಣೆಯನ್ನು ಕೂಡಾ ಮಾಡಲಾಗಿದ್ದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಬೆಂಗಳೂರು ಚಲೋ ಗೆ ಬರುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..