ಬೆಂಗಳೂರು –
ನಾಳೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ 7ನೇ ವೇತನ ಆಯೋಗದ ವರದಿ – ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರಿ ನೌಕರರು…..7ನೇ ವೇತನ ಆಯೋಗ. ವನ್ನು ಭೇಟಿಯಾದ KSPSTA ಟೀಮ್ ಹೌದು
ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ರಚನೆ ಮಾಡಿರುವ 7ನೇ ವೇತನ ಆಯೋಗದ ಅವಧಿ ಮಾರ್ಚ್ 15 ಕ್ಕೆ ಮುಕ್ತಾಯವಾಗಲಿದೆ.ಈಗಾಗಲೇ 7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ಕಂಪ್ಲೀಟ್ ಮಾಹಿತಿಯೊಂದಿಗೆ ವರದಿಯನ್ನು ಸಿದ್ದತೆ ಮಾಡಿ ದ್ದಾರೆ.
ಹೀಗಿರುವಾಗ ಈಗಾಗಲೇ 2 ಬಾರಿ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿದ್ದು ಮತ್ತೆ ಮಾರ್ಚ್ 15 ಕ್ಕೆ ಸಮಯ ಮುಕ್ತಾಯವಾಗಿಲಿದ್ದು ಹೀಗಿರುವಾಗ ಒಂದು ಕಡೆಗೆ ಅವಧಿ ಮುಕ್ತಾಯ ವಾಗಲಿದ್ದು ಮತ್ತೊಂದೆಡೆ ಲೋಕಸಭಾ ಚುನಾವ ಣೆಯ ನೀತಿ ಸಂಹಿತಿ ಹೀಗಾಗಿ ಈ ಒಂದು ವಿಚಾರ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 7ನೇ ವೇತನ ಆಯೋಗದ ಟೀಮ್ ನನ್ನು ಭೇಟಿ ಮಾಡಲಾಯಿತು.
ಸಂಘದ ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡಲಾ ಯಿತು. ಬಹುನಿರೀಕ್ಷಿತ 7ನೇ ವೇತನ ಆಯೋಗ ದಿಂದ ವರದಿಯು ನಾಳೆ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂಬ ಆಶಾಭಾವನೆಯನ್ನು ಸಂಘಟನೆಯ ನಾಯಕರು ವ್ತಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 7ನೇ ವೇತನ ಆಯೋಗದ ಅಧ್ಯಕ್ಷ ರಾದ ಸುಧಾಕರ ರಾವ್ ಅವರನ್ನು ಹಾಗೂ ವೇತನ ಆಯೋಗದ ಕಾರ್ಯದರ್ಶಿಗಳಾದ ಶ್ರೀಮತಿ ಹೆಪ್ಸಿಬಾ ರಾಣಿ ಕೊರ್ಲಪೇಟೆಅವರನ್ನು ವೇತನ ಆಯೋಗದ ಕಛೇರಿಯಲ್ಲಿ ಭೇಟಿ ಮಾಡಿ ಶಿಕ್ಷಕರಿಗೆ ಶಿಕ್ಷಕರಿಗೆ ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸಬೇಕೆಂದು ಒತ್ತಾಯವನ್ನು ಮಾಡಿದರು
ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕೆಂದು ವಿನಂತಿಸಿ ಅವರೊಂದಿಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಅತ್ಯಂತ ಸಂತೋಷದಿಂದ ಮಾತನಾಡಿದ ಅಧ್ಯಕ್ಷರು ನಿಮ್ಮ ಜೊತೆ ಸಂಘಟ ನೆಯ ಜೊತೆ ಚರ್ಚಿಸಿದಂತೆ ಶಿಕ್ಷಕರಿಗೆ ಸಾಧ್ಯ ವಾದಷ್ಟು ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸ ಲಾಗುವುದು ಮುಖ್ಯಮಂತ್ರಿಗಳ ಸಮಯಾ ವಕಾಶವನ್ನು ಕೊರಿದ್ದು
ಅವರು ಸಮಯವನ್ನು ನಾಳೆ ಅಥವಾ ನಾಡಿದ್ದು ನೀಡಲಿದ್ದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾ ಗುವುದು ಎಂದು ತಿಳಿಸಿದರು. ರಾಜ್ಯಾಧ್ಯಕ್ಷರೊಂ ದಿಗೆ ಪ್ರಧಾನ ಕಾರ್ಯದರ್ಶಿ ಮತ್ತು ಈ ಒಂದು ಸಂದರ್ಭದಲ್ಲಿ ರಾಜ್ಯ ಕೋಶ್ಯಾಧ್ಯಕ್ಷರಾದ ಸುರೇಶ ಶಡಶ್ಯಾಳ,ರಾಜ್ಯ ಸಹ ಕಾರ್ಯದರ್ಶಿಗಳಾದ ಹೆಚ್.ಎಸ್.ಚೇತನರವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..