ಕೊಪ್ಪಳ –
ಕಾಲೇಜಿನ ಸಾಂಸ್ಕೃತಿಕ ದಿನಾಚರಣೆಯಂದು ಕಾಲೇಜು ಪ್ರಾಧ್ಯಾಪಕಿಯೊಬ್ಬರು ವೇದಿಕೆ ಮೇಲೆ ವಿದ್ಯಾರ್ಥಿಗಳ ಜೊತೆ ಬಸಂತಿ ಹಾಡಿಗೆ ಭರ್ಜರಿ ಡಾನ್ಸ್ ಮಾಡಿ ಚರ್ಚೆಗೆ ಗ್ರಾಸರಾಗಿದ್ದಾರೆ.

ಹೌದು. ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಈ ವೇಳೆ ದೈಹಿಕ ಶಿಕ್ಷಕಿ ಶೋಭಾ, ಬಸಂತಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ವಿದ್ಯಾರ್ಥಿಗಳು ಶಿಕ್ಷಕಿಯ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಪ್ಪಳದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಥದ್ದೊಂದು ಹಾಡಿಗೆ ಉಪನ್ಯಾಸಕಿ ವಿದ್ಯಾರ್ಥಿ ಗಳ ಜೊತೆ ಕುಣಿದು ಸಂಭ್ರಮಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.