ಬೆಂಗಳೂರು –
ಯಾವುದೇ ಒಂದು ಸಮಸ್ಯೆ ಸಂಕಷ್ಟ ಬಂದರೆ ಅವುಗಳ ಪರವಾಗಿ ಅವರ ಪರವಾಗಿ ಸಂಭಂಧಿಸಿ ದವರು ಧ್ವನಿ ಎತ್ತಬೇಕು ಸ್ಪಂದಿಸಬೇಕು.ಅದಕ್ಕೆ ನಾಯಕರು ಸಂಘಟನೆ ಎನ್ನುತ್ತಾರೆ ಅದಕ್ಕಾಗಿ ಒಂದು ಸಂಘಟನೆ ಇರುತ್ತದೆ ಜೊತೆಗೆ ನಾಯಕರು ಇರುತ್ತಾರೆ.ಆದರೆ ಶಿಕ್ಷಕರ ವಿಚಾರದಲ್ಲಿ ಈ ಮಾತು ಯಾಕೋ ಸುಳ್ಳಾಗುತ್ತಿದೆ. ರಾಜ್ಯದ ಪ್ರತಿಯೊಬ್ಬ ಶಿಕ್ಷಕರು ತಮ್ಮದೆಯಾದ ಸಂಘಟನೆಗಾಗಿ ಪ್ರತಿ ವರುಷ ತಪ್ಪದೇ ತಮ್ಮ ವೇತನದಲ್ಲಿ ವಾರ್ಷಿಕ ಸದಸ್ಯತ್ವ ಹಣವನ್ನು ಕೊಡುತ್ತಾರೆ. ಯಾವುದೇ ಸಮಸ್ಯೆ ಸಂಕಷ್ಟ ತೊಂದರೆ ಬಂದಾಗ ಆ ಕುರಿತಂತೆ ಧ್ವನಿ ಎತ್ತಿ ಸ್ಪಂದಿಸಲಿ ಎಂಬ ಕಾರಣಕ್ಕಾಗಿ ರಾಜ್ಯ ಮಟ್ಟದಲ್ಲಿ ಸಂಘಟನೆ ರಚನೆ ಮಾಡಿಕೊಂಡು ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರನ್ನು ಆಯ್ಕೆ ಮಾಡಿರುತ್ತಾರೆ ಆದರೆ ನಾಡಿನ ಶಿಕ್ಷಕರ ವಿಚಾರದಲ್ಲಿ ಈ ಒಂದು ಮಾತು ನೂರಕ್ಕೆ ನೂರರಷ್ಟು ಅಕ್ಷರಶಃ ಸುಳ್ಳಾಗಿದೆ. ಹೌದು ಈ ಒಂದು ಮಾತಿಗೆ ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಕಂಡು ಬರುತ್ತಿರುವ ಒಂದಲ್ಲ ಒಂದು ಬೆಳವಣಿಗಳೇ ಸಾಕ್ಷಿಯಾಗಿವೆ.
ಘಟನೆ – 1
ರಾಜ್ಯದಲ್ಲಿ ಕರೋನಾ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ರಾಜ್ಯದ 11 ಜಿಲ್ಲೆಗಳನ್ನು ಹೊರತು ಪಡಿಸಿ ಇನ್ನೂಳಿದ 19 ಜಿಲ್ಲೆಗಳಲ್ಲಿ ಶಾಲೆಗಳ ಆರಂಭ ವಿಚಾರದಲ್ಲಿ ಬಸ್ ಸೌಲಭ್ಯವಿರದಿದ್ದರೂ ಕೂಡಾ ಶಾಲೆಗಳಿಗೆ ಶಿಕ್ಷಕರಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಶಿಕ್ಷಕರ ನೋವಿಗೆ ಮನವಿಗೆ ಸ್ಪಂದಿಸದಿರೊದು
ಘಟನೆ -2
ರಾಜ್ಯದಲ್ಲಿ ಈಗಾಗಲೇ ಸಾಲು ಸಾಲಾಗಿ ಕೋವಿಡ್ ಗೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಮೃತರಾಗಿದ್ದಾರೆ ಹೀಗಿರುವಾಗ ಮೈಸೂರಿನಲ್ಲಿ ದಕ್ಷಿಣ ವಲಯ ಶಿಕ್ಷಣಾಧಿಕಾರಿ ಮತ್ತೆ ಕೋವಿಡ್ ಗೆ ಶಿಕ್ಷಕರಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆ ಈ ಒಂದು ವಿಚಾರದಲ್ಲೂ ಸಂಘಟನೆ ಮೌನವಾಗಿರೊದು
ಘಟನೆ -3
ರಾಜ್ಯದಲ್ಲಿ ಎರಡನೇಯ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಗೆ ಶಿಕ್ಷಕರು ಮೃತರಾಗಿದ್ದಾರೆ ಹೀಗಿರುವಾಗ ಶಿಕ್ಷಕರಿಗೆ ಈವರೆಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಕೊಡಿಸದಿರೊದು ಮನವಿ ಪತ್ರ ಕೊಟ್ಟು ಸುಮ್ಮನಾಗಿದ್ದಾರೆ ಹೊರತಾಗಿ ಏನಾದರೂ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಆಗದಿರೊದು ದುರಂತವಾಗಿದೆ
ಘಟನೆ -4
ಕಳೆದ ವರುಷವೂ ಕೂಡಾ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಗೆ ರಾಜ್ಯದಲ್ಲಿ ಮೃತರಾಗಿದ್ದಾರೆ. ಎಷ್ಟು ಜನ ಮೃತರಾಗಿದ್ದಾರೆ ಅವರ ಕುಟುಂಬಕ್ಕೆ ಈವರೆಗೆ ಸರ್ಕಾರದಿಂದ ಸೂಕ್ತವಾದ ಪರಿಹಾರ ದೊರಕಿಸಿಕೊಡದಿರೊದು
ಘಟನೆ -5
ಶಿಕ್ಷಕರು ತಾವು ಆಯಿತು ತಮ್ಮ ಕೆಲಸ ಆಯಿತು ಎಂದುಕೊಂಡು ಕೆಲಸ ಮಾಡುವವರು ಸಮಸ್ಯೆ ತೊಂದರೆ ಬಂದಾಗ ಅವರ ಧ್ವನಿಗೆ ಸ್ಪಂದಿಸಬೇಕು ಆದರೆ ಅದು ಯಾವುದು ಆಗುತ್ತಿಲ್ಲ ಕೇವಲ ಕಾಗದ ದಲ್ಲಿ ಇವರ ಕೂಗೂ ಅಬ್ಬರ ಕಂಡು ಬರುತ್ತಿದೆ ಇದನ್ನು ನೋಂದ ಶಿಕ್ಷಕರೇ ಹೇಳಿದ್ದಾರೆ ಇದಕ್ಕೆ ವೈಫಲ್ಯವು ಕೂಡಾ ಒಂದಾಗಿದೆ
ಘಟನೆ – 6
ಇನ್ನೂ ಚುನಾವಣೆಯಲ್ಲಿದ್ದ ಅಬ್ಬರ ಆರ್ಭಟ ಶಿಕ್ಷಕರ ಸಮಸ್ಯೆ ವಿರುದ್ದ ಯಾಕೇ ಕಂಡು ಬರೊದಿಲ್ಲ ಯಾಕೇ ಕೇಳಿ ಬರೊದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಪದೇ ಪದೇ ಈ ಒಂದು ಮಾತು ನಿಜವಾಗುತ್ತಿದ್ದು ಇದರಿಂದ ನಾಡಿನ ಶಿಕ್ಷಕರು ಸಿಡಿದೆದ್ದಿದ್ದಾರೆ.
ಇನ್ನೂ ಸಾಕಷ್ಟು ಉದಾಹರಣೆ ಗಳಿದ್ದು ಇನ್ನಾದರೂ ಸಂಘಟನೆಯ ನಾಯಕರು ಇದೇಲ್ಲವನ್ನು ಅರಿತುಕೊಂಡು ಸೇವೆಯೆ ನಮ್ಮ ಗುರಿ ಸೇವೆಯೇ ನಮ್ಮ ಉದ್ದೇಶ ಎಂದುಕೊಂಡು ಶಿಕ್ಷಕರ ಧ್ವನಿಯಾಗಿರುವವ ನಾಯಕರು ಕೆಲಸ ಮಾಡಬೇಕು ಇಲ್ಲವಾದರೆ ಶಿಕ್ಷಕರು ಸಿಡಿದೆಳುತ್ತಾರೆ .