ಶಿಕ್ಷಕನೊಬ್ಬರ ಕೊಲೆ ನಡೆದರು ಮಾತನಾಡದ ಸಂಘಟನೆಯ ನಾಯಕರು – ಖಂಡಿಸಿ ಮನವಿ ನೀಡಬೇಕಾದ ಸಂಘಟನೆಯ ನಾಯಕರು ಮೃತರಾದವರು ನಿಮ್ಮವರಲ್ಲವೇ ನಾಯಕರೇ…..

Suddi Sante Desk

ಬೀದರ್ –

ಬೀದರ್ ನಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಬರ್ಬರ ವಾಗಿ ಹತ್ಯೆ ಮಾಡಿದ ಪ್ರಕರಣ ನಡೆದು 24 ಗಂಟೆ ಕಳೆದರು ಘಟನೆ ಕುರಿತಂತೆ ಈವರೆಗೆ ಶಿಕ್ಷಕರ ಸಂಘಟನೆಯ ಯಾವುದೇ ಒಬ್ಬ ಒಬ್ಬ ನಾಯಕರು ಖಂಡಿಸಿಲ್ಲ ಆರೋಪಿ ಗಳ ಪತ್ತೆಗಾಗಿ ಮನವಿಯನ್ನು ನೀಡಿಲ್ಲ.

ಹೌದು ಯಾರ ಮೇಲೆ ಏನೇ ಆದರೂ ಆಯಾ ಸಂಘಟನೆ ಯವರು ಬೀದಿಗಿಳಿದು ಹೋರಾಟವನ್ನು ಮಾಡುತ್ತಾರೆ ಘಟನೆಯನ್ನು ಖಂಡಿಸುತ್ತಾರೆ ಆರೋಪಿಗಳ ಬಂಧನಕ್ಕೆ ಒತ್ತಾಯವನ್ನು ಮಾಡುತ್ತಾರೆ ಅದರಲ್ಲೂ ನ್ಯಾಯವಾದಿಗಳ ವಿಚಾರಕ್ಕೆ ಬಂದರೆ ಬೇಡಿಕೆ ಈಡೇರಿರುವವರೆಗೂ ತಪ್ಪು ಮಾಡಿದವರು ಮುಂದೆ ಬಂದು ಮಂಡಿ ಊರುವವರೆಗೂ ಬೀಡುವುದಿಲ್ಲ ಹೀಗಿರುವಾಗ ಕೊಲೆಯಾದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಕುರಿತಂತೆ ಈವರೆಗೆ ಶಿಕ್ಷಕರ ಸಂಘಟನೆಯ ನಾಯಕರು ಮೌನವಹಿಸಿರೊದು ವಿಷಾದದ ಸಂಗತಿ

ಈಗಾಗಲೇ ಕೊಲೆ ಕುರಿತಂತೆ ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಮಾಡುತ್ತಿದ್ದು ಇದರ ನಡುವೆ ಘಟನೆ ಕುರಿತಂತೆ ಖಂಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಮನವಿಯನ್ನು ಆದರೂ ಸಂಘಟನೆಯ ನಾಯಕರು ಮಾಡಬೇಕಾಗಿತ್ತು ಆದರೆ ಈವರೆಗೆ ಯಾವುದೇ ಕೆಲಸವನ್ನು ಮಾಡದಿರೊದು ಬೇಸರದ ಸಂಗತಿಯಾಗಿದೆ.ಅದರಲ್ಲೂ ಶಿಕ್ಷಕನನ್ನು ಅಮಾನುಷವಾಗಿ ಮುಖಕ್ಕೆ ಕಲ್ಲು ಹಾಕಿ ಮರ್ಮಾಂಗಕ್ಕೆ ಹೊಡೆದು ಸಾಯಿಸಲಾಗಿದೆ.

ಔರಾದ ಪಟ್ಟಣದಲ್ಲಿನ ನಿನ್ನೆ ಸರ್ಕಾರಿ ಶಿಕ್ಷಕನ ಬರ್ಬರ ಕೊಲೆಯಾಗಿತ್ತು ಪಟ್ಟಣದ ಹೊರವಲಯದ ಕೃಷಿ ತರಬೇತಿ ಕೇಂದ್ರದಲ್ಲಿನ ಸಮೀಪ ಶಿಕ್ಷಕನ ಬರ್ಬರ ಕೊಲೆಯನ್ನು ಮಾಡಲಾಗಿತ್ತು.ಪಟ್ಟಣದ ಲಿಡ್ಕರ್ ಕಾಲೋನಿಯ ನಿವಾಸಿ ವಿಜಯ ಕುಮಾರ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಯಾರೊ ಅಪರಿಚಿತರು ಈ ಸರ್ಕಾರಿ ಶಾಲೆ ಶಿಕ್ಷಕ ವಿಜಯಕುಮಾರ್ ನನ್ನು ಕೊಲೆ ಮಾಡಿದ್ದಾರೆ, ಔರಾದ ತಾಲೂಕಿನ ಕರಂಜಿ (ಕೆ) ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿನ ಶಿಕ್ಷಕ ವಿಜಯಕು ಮಾರ್ ಆಗಿದ್ದಾರೆ. ಮೃತ ದುರ್ದೈವಿ ವಿಜಯಕುಮಾರ ಮುಖಕ್ಕೆ ಕಲ್ಲಿನಿಂದ ಹೊಡೆದು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ಔರಾದ ಪೊಲೀಸ್ ಠಾಣೆ ಪೊಲೀಸರು ನಿನ್ನೆ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಯನ್ನು ಕೈಗೊಂಡಿದ್ದು ಘಟನೆ ನಡೆದು ಒಂದು ದಿನ ಕಳೆದರು ಕೂಡಾ ಈವರೆಗೆ ಮಾತ್ರ ಕೊಲೆಗೆ ಕಾರಣವಾಗಲಿ ಆರೋಪಿಗಳ ಸುಳಿವು ಸಿಕ್ಕಿಲ್ಲ ಹೀಗಾಗಿ ಈ ಒಂದು ಶಿಕ್ಷಕನ ಸಾವಿನ ಪ್ರಕರಣ ನಿಗೂಢ ವಾಗಿ ಉಳಿದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.