ಬೆಂಗಳೂರು –
ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದೆ. ಇದರಿಂದಾಗಿ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳವಾಗಿದೆ, ಭತ್ಯೆಗಳು ಸಹ ಏರಿಕೆಯಾಗಿದೆ.
ಆದರೆ, ಈಗ ವೇತನ ಹೆಚ್ಚಳದ ಕಾರಣದಿಂದಾಗಿಯೇ ಸರ್ಕಾರಿ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಹಿಂದುಳಿದ ವರ್ಗಗಳಿಗೆ ಸೇರಿದ ಅಧಿಕಾರಿ, ನೌಕರರು ವೇತನ ಹೆಚ್ಚಳದಿಂದ ಹೊಸ ಸಮಸ್ಯೆಗೆ ಸಿಲುಕಿದ್ದಾರೆ.
ವೇತನ ಆಯೋಗದ ವರದಿ ಜಾರಿ ಬಳಿಕ ಎಲ್ಲಾ ವರ್ಗದ ನೌಕರರ ವೇತನ ಹೆಚ್ಚಳವಾಗಿದೆ. ‘ಸಿ’ ವರ್ಗದ ನೌಕರರ ವೇತನ ಹೆಚ್ಚಳದ ಬಳಿಕ ಪರಿಷ್ಕೃತ ವಾರ್ಷಿಕ ಆದಾಯದ ಮಿತಿ 9 ಲಕ್ಷ ರೂ. ದಾಟುತ್ತಿದೆ ‘ಸಿ’ ವರ್ಗದ ನೌಕರರ ವಾರ್ಷಿಕ ಆದಾಯ ಹೆಚ್ಚಳವಾಗಿದೆ. ಇದ ರಿಂದಾಗಿ ಅಧಿಕಾರಿ, ನೌಕರರ ಮಕ್ಕಳು ಕೆನೆಪದರ ನೀತಿ ಪ್ರಕಾರ ಮೀಸಲಾತಿ ಸೌಲಭ್ಯದಿಂದ ವಂಚಿತರಾಗು ತ್ತಿದ್ದಾರೆ.
ನವೋದಯ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಮಾಡು ವುದು ಸವಾಲಾಗುತ್ತಿದೆ. ಮೀಸಲಾತಿ ಕೈ ತಪ್ಪುತ್ತಿರುವ ಕಾರಣ ಸಾಮಾನ್ಯ ವರ್ಗದವರ ಜೊತೆ ಹಿಂದುಳಿದ ವರ್ಗಗಳಿಗೆ ಸೇರಿದ ಸರ್ಕಾರಿ ನೌಕರರ ಮಕ್ಕಳು ಪೈಪೋಟಿ ಎದುರಿಸಬೇಕಿದೆ.ಆದಾಯದ ಮಿತಿ ಪರಿಷ್ಕರಣೆ ಮಾಡಿ ಶಿಕ್ಷಣ,
ಉದ್ಯೋಗ ಕ್ಷೇತ್ರದಲ್ಲಿ ಒಬಿಸಿಯ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ಕೆನೆಪದರ ನೀತಿಯನ್ನು ನಿರ್ಣಯಿಸಬೇಕಿದೆ. ಇದಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಬೇಕು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿದೆ.ಮಾಜಿ ಸಚಿವ ಎಚ್.ಎಂ.ರೇವಣ್ಣ ಈ ಕುರಿತು ಮಾತನಾಡಿ, “ವೇತನ ಹೆಚ್ಚಳವಾಗಿದ್ದರೂ ಸಹ ಒಬಿಸಿ ನೌಕರರ ವಾರ್ಷಿಕ ಆದಾಯದ ಮಿತಿ ಏಳು ವರ್ಷಗಳಷ್ಟು ಹಿಂದಿನದು.
ಇದರಿಂದ ನೌಕರರ ಮಕ್ಕಳ ಉದ್ಯೋಗ, ಶಿಕ್ಷಣಕ್ಕೆ ಸಮಸ್ಯೆ ಆಗುತ್ತಿದೆ. ವಾರ್ಷಿಕ ಆದಾಯದ ಮಿತಿಯನ್ನು ಪ್ರಸ್ತುತ ಇರುವ 8 ಲಕ್ಷ ರೂ.ಗಳಿಂದ ಹೆಚ್ಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡ ಲಾಗಿದೆ” ಎಂದು ಹೇಳಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ ಮೊದಲ ಅವಧಿಗೆ ಸಿಎಂ ಆಗಿದ್ದಾಗ ಒಬಿಸಿ ನೌಕರರ ವಾರ್ಷಿಕ ಆದಾಯದ ಮಿತಿಯನ್ನು 6 ರಿಂದ 8 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದರು. ಕೆನೆಪದರಕ್ಕೆ ನಿಗದಿ ಮಾಡಿರುವ ಅಭ್ಯರ್ಥಿಗಳು, ಅವರ ತಂದೆ/ ತಾಯಿ/ ಪೋಷಕರ ವಾರ್ಷಿಕ ಮಿತಿ ಹೆಚ್ಚಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2018ರಲ್ಲಿ ಆದೇಶ ಹೊರಡಿಸಿತ್ತು.
ಲಕ್ಷಾಂತರ ನೌಕರರು ಈ ಮಿತಿಯ ಹೆಚ್ಚಳದಿಂದ ಲಾಭ ಪಡೆದಿದ್ದರು. ಒಬಿಸಿ ಸಮುದಾಯದ ನೌಕರರ ಮಕ್ಕಳಿಗೆ ಅನುಕೂಲವಾಗಿತ್ತು. ಈಗಲೂ ಸಿದ್ದರಾಮಯ್ಯ ಸಿಎಂ ಆಗಿದ್ದು, ಸಮಸ್ಯೆ ಅವರಿಗೆ ತಿಳಿದಿದೆ. ಆದ್ದರಿಂದ ವಾರ್ಷಿಕ ಆದಾಯದ ಮಿತಿ ಏರಿಕೆ ಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಈ ಕುರಿತು ಪ್ರತಿಕ್ರಿಯೆ ನೀಡಿ, ವೇತನ ಹೆಚ್ಚಳದಿಂದ ಒಬಿಸಿ ನೌಕರರು ಎದುರಿಸುತ್ತಿರುವ ಸಮಸ್ಯೆಯತ್ತ ಸಿಎಂ ಸಿದ್ದರಾಮಯ್ಯ ಗಮನ ಸೆಳೆಯಲಾಗಿದೆ. ವಾರ್ಷಿಕ ಆದಾಯದ ಮಿತಿ ಯನ್ನು 8 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿದರೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..
 
			

 
		 
			



















