ಬೆಂಗಳೂರು –
ಪಾಸಿಟಿವಿಟಿ ರೇಟ್ ಕಡಿಮೆ ಇಲ್ಲದ ಕಾರಣಕ್ಕಾಗಿ ರಾಜ್ಯದಲ್ಲಿ ಜೂನ್ 14 ರಿಂದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.ಜೂನ್ 21 ರವರೆಗೆ ರಾಜ್ಯದ ಹನ್ನೊಂದು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ,ಹಾಸನ,ಮೈಸೂರು,ಚಿಕ್ಕಮಂಗಳೂರು,ಮಂಡ್ಯ,ಬೆಳಗಾವಿ,ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ,ಕೊಡಗು ಹೀಗೆ ದಾವಣಗೇರಿ ಹೀಗೆ ಪಾಸಿಟಿ ವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಈ ಜಿಲ್ಲೆ ಗಳಲ್ಲಿ ಲಾಕ್ ಡೌನ್ ನ್ನು ಮುಖ್ಯಮಂತ್ರಿ ವಿಸ್ತರಣೆ ಮಾಡಿದ್ದಾರೆ.ಮುಖ್ಮಮಂತ್ರಿಯವರ ವಿಚಾರ ಸ್ವಾಗತ ಆದರೆ ಜೂನ್ 14 ರಿಂದ ಶಾಲೆಗಳಿಗೆ ಹಾಜರಾಗಲು ಶಿಕ್ಷಣ ಇಲಾಖೆ ಶಿಕ್ಷಕರಿಗೆ ಬುಲಾವ್ ನೀಡಿದೆ.
ಶೈಕ್ಷಣಿ ಕ ವರ್ಷ ಆರಂಭ ಕುರಿತಂತೆ ಶಿಕ್ಷಕರಿಗೆ ಹಾಜರಾಗಲು ಆದೇಶವನ್ನು ಇಲಾಖೆ ನೀಡಿದೆ ಒಂದು ಕಡೆ ಲಾಕ್ ಡೌನ್ ವಿಸ್ತರಣೆ,ಮತ್ತೊಂದು ಕಡೆ ಬಸ್ ಗಳ ಸಂಚಾರ ಇರೊದಿಲ್ಲ,ಇನ್ನೂ ಕೆಲವೊಂದಿಷ್ಟು ಶಿಕ್ಷಕರಿಗೆ ವ್ಯಾಕ್ಸಿನ್ ಮಾಡಿಲ್ಲ, ಶಾಲೆಗಳಿಗೆ ಸ್ಯಾನಿಟೇಶನ್ ಮಾಡಿಸಿಲ್ಲ ಕರೋನಾ ನಿಯಂತ್ರಣ ಕುರಿತಂತೆ ಯಾವುದೇ ರೀತಿಯಾದ ಮುನ್ನಚ್ಚರಿಕೆಯ ಕ್ರಮಗಳನ್ನು ತಗೆದುಕೊಂಡಿಲ್ಲ, ಇವೆಲ್ಲದರ ನಡುವೆ ಗ್ರಾಮೀಣ ಪ್ರದೇಶದಗಳಲ್ಲಿ ಇನ್ನೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕರೋನಾ ಹೆಚ್ಚಾಗಿದೆ ಹೀಗಾಗಿ ಇಂಥಹ ಪರಸ್ಥಿತಿಯ ನಡುವೆ ಶಿಕ್ಷಕರಿಗೆ ಕಡ್ಡಾಯವಾಗಿ ಹಾಜರಾಗಲು ಸಾಧ್ಯವಾ ಗುತ್ತದೆನಾ ಹೇಳಿ ಶಿಕ್ಷಣ ಸಚಿವರೇ ನಿವೇ ವಿಚಾರ ಮಾಡಿ ನೋಡಿ
ಇಂಥಹ ಅಸಾಧ್ಯವಾದ ಪರಸ್ಥಿತಿಯಲ್ಲಿ ಹೇಗೆ ಶಿಕ್ಷಕರು ಅದರಲ್ಲೂ ಮಹಿಳಾ ಶಿಕ್ಷಕರು ಶಾಲೆಗಳಿಗೆ ಹೊಗಬೇಕು.ಒಂದನೇಯ ಅಲೆಗಿಂತ ಎರಡನೇಯ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಸಾವಿಗೀ ಡಾಗಿದ್ದು ಇನ್ನೂ ಕೂಡಾ ಕಂಡು ಬರುತ್ತಿದ್ದು ಶಿಕ್ಷಕರು ಇದರಿಂದ ಭಯಗೊಂಡಿದ್ದಾರೆ.
ಹೀಗಿರುವಾಗ ತರಾತುರಿಯಲ್ಲಿ ಜೂನ್ 14 ಕ್ಕೆ ಶಿಕ್ಷಕರಿಗೆ ಹಾಜರಾಗಲು ಆದೇಶದ ಬದಲಿಗೆ ಮನೆಯಲ್ಲಿಯೇ ಕೆಲಸ ಮಾಡಲು ಆದೇಶವನ್ನು ಮಾಡುವಂತೆ ನಾಡಿನ ಶಿಕ್ಷಕರು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವರು ಶಿಕ್ಷಣ ಸಚಿವರಿಗೆ ಒತ್ತಾಯವನ್ನು ಮಾಡಿದ್ದಾರೆ
ಆದರೂ ಕೂಡಾ ಈವರೆಗೆ ಮಾತ್ರ ಯಾವುದೇ ಸ್ಪಷ್ಟವಾದ ನಿರ್ಧಾರ ಹೊರಬೀಳುತ್ತಿಲ್ಲ ಹೀಗಾಗಿ ಹತ್ತು ಹಲವಾರು ಸಮಸ್ಯೆ ಸಂಕಷ್ಟಗಳ ನಡುವೆ ಶಾಲೆಗಳಿಗೆ ಹೇಗೆ ಹೋಗೊದು ಎಂಬ ದೊಡ್ಡ ಚಿಂತೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ.ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಮ್ಮ ಶಿಕ್ಷಣ ಸಚಿವರು ಮೌನವಾಗಿದ್ದಾರೆ.