ಅಂಕೋಲ –
ಮದ್ಯವನ್ನು ಸಾಗಿಸುತ್ತಿದ್ದ ಲಾರಿಯೊಂದು ಅಪ ಘಾತಕ್ಕಿಡಾದ ಘಟನೆ ಅಂಕೋಲಾದಲ್ಲಿ ನಡೆದಿದೆ. ಇನ್ನೂ ಮದ್ಯ ಸಾಗಿಸುತ್ತಿದ್ದ ಲಾರಿ ಅಪಘಾತ ವಾದ ಸುದ್ದಿ ತಿಳಿಯುತ್ತಿದ್ದಂತೆ ಇದನ್ನು ನೋಡಿದ ಜನರು ಎದ್ದೋ ಬಿದ್ದೊ ಎಂಬಂತೆ ಮದ್ಯದ ಬಾಟಲ್ ಗಳ ನ್ನು ತಗೆದುಕೊಂಡು ಹೋಗಿದ್ದು ಕಂಡು ಬಂದಿತು

ಹೌದು.. ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂ ಕಿನ ಅಡ್ಲೂರು ಗ್ರಾಮದ ಬಳಿ ಇಂದು ಮದ್ಯವನ್ನು ಸಾಗಿಸುತ್ತಿದ್ದ ಲಾರಿಯೊಂದು ಅಪಘಾ ತಕ್ಕೀಡಾಗಿ ಪಲ್ಟಿಯಾಗಿದೆ. ಈ ಲಾರಿಯಲ್ಲಿ ಗೋವಾ ದಿಂದ ಮದ್ಯವನ್ನು ತುಂಬಿಕೊಂಡು ಹುಬ್ಬಳ್ಳಿಗೆ ಸಾಗಿಸಲಾ ಗುತ್ತಿತ್ತು.ಆದರೆ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಬಾಕ್ಸ್ ಗಳನ್ನು ತುಂಬಿಕೊಂಡು ಹೊರಟಿದ್ದ ಈ ಲಾರಿ ಅಪಘಾತಕ್ಕೀಡಾಗಿ ಪಲ್ಟಿಯಾಗಿದ್ದರಿಂದ ಅದರಲ್ಲಿ ತುಂಬಿದ್ದ ಮದ್ಯದ ಬಾಕ್ಸ್ ಗಳು ರಸ್ತೆಗೆ ಬಿದ್ದು ಚೆಲ್ಲಾ ಪಿಲ್ಲಿಯಾಗಿವೆ.

ಇನ್ನೂ ಮದ್ಯವನ್ನು ತುಂಬಿದ ಲಾರಿ ಅಪಘಾತ ವಾಗಿದ್ದನ್ನು ನೋಡಿ ಇದನ್ನು ಕಂಡ ಜನರು ಲಾರಿ ಬಳಿ ಬಂದು ಮದ್ಯದ ಬಾಟಲಿಗಳ ಬಾಕ್ಸ್ ಗಳನ್ನೇ ಹೊತ್ತೊಯ್ದಿದ್ದಾರೆ.ಕೈಗೆ ಸಿಕ್ಕ ಸಿಕ್ಕ ಬಾಕ್ಸ್ ಗಳನ್ನು ಹೊತ್ತುಕೊಂಡು ಹೋದರು.ಕೆಲವರು ಕೈಗೆ ಸಿಕ್ಕ ಸಿಕ್ಕ ಬಾಟಲ್ ಗಳನ್ನು ಕೆಲವರು ತಗೆದುಕೊಂಡು ಹೋದ ರೆ ಇನ್ನೂ ಕೆಲವರು ಸಿಗದೆ ನಿರಾಶೆಯಾಗಿದ್ದು ಕಂಡು ಬಂದಿತು