ಮೈಸೂರು –
ಮೈಸೂರು ಮಹಾರಾಜರು ಯುದ್ಧ ಗೆದ್ದ ರಾಜರಲ್ಲ…! ಸುಖ ಜೀವನ ನಡೆಸಿದ ಶೋಕಿವಾಲಗಳು ಹೀಗೆಂದು ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ನಿಗಮದ ಅಧ್ಯಕ್ಷ ಬಿಜೆಪಿ ಮುಖಂಡ ಅಪ್ಪಣ್ಣ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಬಿಜೆಪಿ ಎಸ್‌ಟಿ ಮೋರ್ಚಾ ಕೋರ್ ಕಮಿಟಿ ಸಭೆಯಲ್ಲಿ ಹೇಳಿಕೆ.
ಮದಕರಿ ನಾಯಕನ ವಂಶಸ್ಥರೇ ನಿಜವಾದ ಕ್ಷೌರ್ಯವಂತರು.ಮೈಸೂರು ಮಹಾರಾಜರು ಯಾರ ವಿರುದ್ದವೂ ಯುದ್ದ ಮಾಡಿದವರಲ್ಲ ಎಂದರು.

ಎಲ್ಲಿ ಹೋದರೂ ಶೋಕಿ ಜೀವನ ನಡೆಸಿದವರು.
ಮೈಸೂರು ಪ್ರಾಂತ್ಯದಲ್ಲಿ ವಾಲ್ಮೀಕಿ, ಬೇಡ ಸಮಾಜದ 77 ಮಂದಿ ಪಾಳೆಗಾರರಿದ್ದರು.
ಮದಕರಿ ನಾಯಕರ ವಂಶಸ್ಥರು ಮಹಾರಾಜರ ನಿಜವಾದ ಸೈನಿಕರಾಗಿದ್ದರು ಎಂದರು.

ಇನ್ನೂ ಹೈದರಾಲಿಯನ್ನ ಕರೆದುಕೊಂಡು ಬಂದಿದ್ದು ಮದಕರಿ ನಾಯಕರೆಂದರು ಇವರು.
ವಿವಾದಾತ್ಮಕ ಹೇಳಿಕೆ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮುಖಂಡ ಅಪ್ಪಣ್ಣ.ನಾಯಕ ಸಮುದಾಯದ ಮುಖಂಡರೂ ಆಗಿದ್ದಾರೆ ಅಪ್ಪಣ್ಣ.