ಬೆಂಗಳೂರು –
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ (ರಿ) ಬೆಂಗಳೂರು ಸಂಘಟನೆಯ ನಾಯಕರ ನೇತೃತ್ವದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಭೆ ನಡೆಯಿತು.ಸಚಿವರಾದ ಮಧು ಬಂಗಾರಪ್ಪ ರವರ ನೇತೃತ್ವದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿಗಳಾದ ರೀತಿಶ್ ಸಿಂಗ್ ಕುಮಾರ್, ಶ್ರೀಮತಿ ಕಾವೇರಿ ರವರು,
ನಿರ್ದೇಶಕರಾದ ಪ್ರಸನ್ನ ಕುಮಾಸ ಅವರ ಉಪಸ್ಥಿತಿ ಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕೇಂದ್ರ ಪದಾಧಿಕಾರಿಗಳ ಸಭೆಯನ್ನು ನಡೆಸಲಾಗಿತು
ಈ ಒಂದು ಸಭೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪಿಯು ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ಬಗ್ಗೆ ಚರ್ಚಿಸಿದಂತೆ ಘನ ಸರ್ಕಾರ*
ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪಿಯು ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ಬಗ್ಗೆ ನಿಯಮಗಳನ್ನು ತಿದ್ದುಪಡಿ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿದೆ.ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪಿಯು ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಆದೇಶವನ್ನು ಹೊರಡಿಸಿರುವ ಘನ ಸರ್ಕಾರದ ಮುಖ್ಯಮಂತ್ರಿಗಳು,
ಉಪಮುಖ್ಯಮಂತ್ರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವರಿಗೆ ಹಾಗೂ ಎಲ್ಲಾ ಗೌರವಾನ್ವಿತ ವಿಧಾನ ಪರಿಷತ್ತಿನ ಸದಸ್ಯರುಗಳಿಗೆ, ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಹೇಳಲಾಯಿತು.
ವಂದನೆಗಳೊಂದಿಗೆ
*ತಮ್ಮ ವಿಶ್ವಾಸಿಗಳು*
*ಸಿದ್ದಬಸಪ್ಪ ಬಿ*
*ರಾಜ್ಯಾಧ್ಯಕ್ಷರು*
*ರಾಮು ಅ ಗುಗವಾಡ*
*ಪ್ರಧಾನ ಕಾರ್ಯದರ್ಶಿ*
*ಎಂ ಕೆ ಬಿರಾದಾರ*
*ಉಪಾಧ್ಯಕ್ಷರು*
*ಧನಸಿಂಗ ರಾಠೋಡ್*
*ಖಜಾಂಚಿ*
*ತುಕಾರಾಮ ಬಾಗೆನ್ನವರ*
*ಸಂಘಟನಾ ಕಾರ್ಯದರ್ಶಿ*
*ದೇವರಾಜೇಗೌಡ*
*ಸಹ ಕಾರ್ಯದರ್ಶಿ*
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..