‌ಶಿಕ್ಷಕರಿಗೆ ಬಿಗ್ ಶಾಕ್ ನೀಡಿದ ಶಿಕ್ಷಣ ಸಚಿವರು – ಶಿಕ್ಷಕರೊಂದಿಗೆ ಇಲಾಖೆಯ ಅಧಿಕಾರಿಗಳಿಗೂ ದೊಡ್ಡ ಶಾಕ್ ನೀಡಿದ ಸಚಿವರು ವೈರಲ್ ಆಗಿದೆ ಈ ಸಂದೇಶ ಇದು ನಿಜನಾ…..

Suddi Sante Desk
‌ಶಿಕ್ಷಕರಿಗೆ ಬಿಗ್ ಶಾಕ್ ನೀಡಿದ ಶಿಕ್ಷಣ ಸಚಿವರು – ಶಿಕ್ಷಕರೊಂದಿಗೆ ಇಲಾಖೆಯ ಅಧಿಕಾರಿಗಳಿಗೂ ದೊಡ್ಡ ಶಾಕ್ ನೀಡಿದ ಸಚಿವರು ವೈರಲ್ ಆಗಿದೆ ಈ ಸಂದೇಶ ಇದು ನಿಜನಾ…..

‌ಶಿಕ್ಷಕರಿಗೆ ಬಿಗ್ ಶಾಕ್ ನೀಡಿದ ಶಿಕ್ಷಣ ಸಚಿವರು  ಶಿಕ್ಷಕರೊಂದಿಗೆ ಇಲಾಖೆಯ ಅಧಿಕಾರಿಗಳಿಗೂ ದೊಡ್ಡ ಶಾಕ್ ನೀಡಿದ ಸಚಿವರು ವೈರಲ್ ಆಗಿದೆ ಈ ಸಂದೇಶ ಇದು ನಿಜನಾ…..

ರಾಜ್ಯದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಅಧಿಕಾರಿ ಗಳಿಗೆ ನೂತನ ಶಿಕ್ಷಣ ಸಚಿವರು ಹೊಸದೊಂದು ತಲೆನೋವಿನ ಕಾರ್ಯದ ಮೂಲಕ ಬಿಗ್ ಶಾಕ್ ನೀಡಿದ್ದಾರೆ.ಹೌದು ಮಕ್ಕಳು ಶಾಲೆಗೆ ಬರದಿದ್ದರೆ ಅದಕ್ಕೆ ಶಿಕ್ಷಕರೇ ಜವಾಬ್ದಾರರಾಗಿದ್ದು ಈ ಒಂದು ಕಾರಣಕ್ಕಾಗಿ ಶಿಕ್ಷಕರ ಸಂಬಳವನ್ನು ಕಟ್ ಮಾಡ ಲಾಗುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ

ಈ ಕುರಿತಂತೆ ಕೆಲ ಡಿಜಿಟಲ್ ಮಾಧ್ಯಮಗಳು ಕೂಡಾ ವರದಿಯನ್ನು ಮಾಡಿದ್ದು ಈ ಕುರಿತಂತೆ ಸರ್ಕಾರದ ಹೊಸ ರೂಲ್ಸ್ ನ್ನು ಸಚಿವರ ಸೂಚನೆ ಯಂತೆ ಜಾರಿಗೆ ತಗೆದುಕೊಂಡು ಬಂದಿದೆಯಂತೆ.

ಸರ್ಕಾರವು ರಾಜ್ಯದ ಶಿಕ್ಷಕರಿಗೆ ಬಿಗ್‌ ಶಾಕ್‌ ನೀಡಿದೆ ಸರ್ಕಾರವು ಮಕ್ಕಳು ಶಾಲೆಗೆ ಬರದಿದ್ದರೆ ಶಿಕ್ಷಕರ ಸಂಬಳ ಕಟ್‌ ಮಾಡುವುದಾಗಿ ಹೊಸ ನಿಯಮವನ್ನು ಜಾರಿಗೊಳಿಸಿದೆಯಂತೆ ಶಾಲೆ ಗಳಲ್ಲಿ ಮಕ್ಕಳ ಹಾಜರಾತಿ ಶೇಕಡಾ 50 ಕ್ಕಿಂತ ಕಡಿಮೆಯಿದ್ದರೆ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ವೇತನವನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ.

ನಿರ್ಲಕ್ಷ್ಯವನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆಯಂತೆ ಆಗಸ್ಟ್ 15ರ ನಂತರ ಬ್ಲಾಕ್‌ನ ಯಾವುದೇ ಶಾಲೆಯಲ್ಲಿ ಮಕ್ಕಳ ಹಾಜ ರಾತಿ ಶೇ.50ಕ್ಕಿಂತ ಕಡಿಮೆಯಿದ್ದರೆ ವೇತನ ನಿಲ್ಲಿಸುವ ಜೊತೆಗೆ ಸಂಬಂಧಪಟ್ಟ ಬಿಇಒ ವಿರುದ್ಧ ಇಲಾಖಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ತಿಳಿಸಿದೆಯಂತೆ.

ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಈ ಕುರಿತು ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿ ಗಳಿಗೆ ಪತ್ರ ನೀಡಿದ್ದಾರಂತೆ. ಪ್ರಾಥಮಿಕ, ಮಧ್ಯಮ ಪ್ರೌಢ ಹಾಗೂ ಪ್ರೌಢಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಶೇ.50ಕ್ಕಿಂತ ಕಡಿಮೆಯಿದ್ದರೆ ಬಿಇಒ ವಿರುದ್ಧ ನಿರ್ಲಕ್ಷ ಹಾಗೂ ಆದೇಶ ಉಲ್ಲಂಘನೆ ಆರೋಪ ಹೊರಿಸಲಾಗುವುದು ಎಂದು ಸ್ಪಷ್ಟಪ ಡಿಸಲಾಗಿದೆ.

ಈ ಸಂಬಂಧ ಪ್ರೌಢ ಶಿಕ್ಷಣ ನಿರ್ದೇಶಕರು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸುಧಾ ರಿಸುತ್ತಿರುವುದು ತಪಾಸಣಾ ವರದಿಯಿಂದ ಸ್ಪಷ್ಟವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಬಿಇಒ ಕಚೇರಿ ಇರುವ ಬ್ಲಾಕ್‌ ಹೆಡ್‌ಕ್ವಾರ್ಟರ್ಸ್‌ನಲ್ಲೂ ಕೂಡ ಸತ್ಯಾಂಶ ಬೆಳಕಿಗೆ ಬಂದಿದೆ.

ಅಲ್ಲಿನ ಕೆಲವು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಇನ್ನೂ ಶೇ.50ಕ್ಕಿಂತ ಕಡಿಮೆ ಇದೆ ಇದು ಕಳವಳ ಕಾರಿ ವಿಷಯ ಬಿಇಒ ಅವರ ಕಚೇರಿ ಹಾಗೂ ಸುತ್ತಮುತ್ತಲಲ್ಲೂ ಗುಣಾತ್ಮಕ ತಪಾಸಣೆ ನಡೆಯುತ್ತಿಲ್ಲ ಎಂಬುದು ತಪಾಸಣಾ ವರದಿಯ ವಿಶ್ಲೇಷಣೆಯಿಂದ ಸ್ಪಷ್ಟವಾಗಿದ್ದು ಸರ್ಕಾರದ ಶಿಕ್ಷಣ ಸಚಿವರ ಈ ಒಂದು ಹೊಸದೊಂದು ಆದೇಶವು ತಲೆನೋವಿನ ಸಂಗತಿಯಾಗಿದ್ದು ಆತಂಕವನ್ನು ತಂದಿಟ್ಟಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.