ಬೆಂಗಳೂರು –
ರಾಜ್ಯದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 6 ರಿಂದ 8ನೇ ತರಗತಿ ವರೆಗಿನ ವೃಂದ ಮತ್ತು ನೇಮಕಾತಿ ತಿದ್ದುಪಡಿ ತರುವ ಕುರಿತಂತೆ ಚರ್ಚೆ ಮಾಡಲು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಭೆಯನ್ನು ಕರೆದಿದ್ದಾರೆ.ಹೌದು ನಾಳೆ ಮಧ್ಯಾಹ್ನ 12 ಗಂಟೆಗೆ ಕೊಠಡಿ 313 ರಲ್ಲಿ ಶಿಕ್ಷಣ ಸಚಿವರು ತಮ್ಮ ಅಧ್ಯಕ್ಷತೆ ಯಲ್ಲಿ ಎಲ್ಲಾ ವಿಧಾನ ಪರಿಷತ್ ಸದಸ್ಯರ ಸಭೆ ಯನ್ನು ಕರೆದಿದ್ದಾರೆ.
ಪ್ರಮುಖವಾಗಿ ಈ ಒಂದು ಸಭೆಯಲ್ಲಿ ಸಿ ಆಂಡ್ ಆರ್ ಕುರಿತಂತೆ ಚರ್ಚೆ ಹಾಗೇ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಚರ್ಚೆ ಮಾಡಲಿದ್ದು ಶಿಕ್ಷಣ ಸಚಿವರೊಂದಿಗೆ ಸಭೆಯಲ್ಲಿ ಎಲ್ಲಾ ವಿಧಾನ ಪರಿಷತ್ ಸದಸ್ಯರುಗಳು ಅಧಿಕಾರಿ ಗಳು ಪಾಲ್ಗೊಳ್ಳಲಿದ್ದಾರೆ.
ಇದರೊಂದಿಗೆ ನಾಳೆಯ ಸಭೆಯಿಂದಾಗಿ ಏನಾದರೂ ಸಿಹಿ ಸುದ್ದಿ ಸಿಗಲಿದೆಯಾ ಎಂಬ ನಿರೀಕ್ಷೆಯಲ್ಲಿ ನಾಡಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿ ದ್ದಾರೆ.