ಬೆಂಗಳೂರು –
SSLC ಫಲಿತಾಂಶ ನಿರೀಕ್ಷೆಯಲ್ಲಿರುವವರಿಗೆ ಮಹತ್ವದ ಮಾಹಿತಿ – ಫಲಿತಾಂಶದ ಬಗ್ಗೆ ಒಂದಿಷ್ಟು ಅಪ್ಡೇಟ್ ಮಾಹಿತಿ ನೀಡಿದ ಶಿಕ್ಷಣ ಸಚಿವರು ಹೌದು
ಹೌದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗ ಳಿಗೆ ಪೋಷಕರಿಗೆ ಶಿಕ್ಷಣ ಸಚಿವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.ಬೆಂಗಳೂರಿನಲ್ಲಿ ಈ ಕುರಿತಂತೆ ಮಾತನಾಡಿದ ಅವರು ಏಪ್ರಿಲ್ ಅಂತ್ಯಕ್ಕೆ ಫಲಿತಾಂಶವು ಬರಲಿದೆ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಅನುಷ್ಠಾನಗೊಳಿಸಿದ್ದಕ್ಕೆ ಆರಂಭದಲ್ಲಿ ಟೀಕೆ ಟಿಪ್ಪಣಿ ವ್ಯಕ್ತವಾಗಿತ್ತು.
ಪರೀಕ್ಷೆ ಪಾರದರ್ಶಕತೆಗಾಗಿ ಇದನ್ನು ಜಾರಿ ಮಾಡಿದ್ದು ಸಾಕಷ್ಟು ಅನುಕೂಲವಾಗಿದೆ ಎಂದರು.ಇನ್ನೂ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ ಗಳನ್ನು ಮಾಡಿದ್ದಕ್ಕೂ ಆಕ್ಷೇಪಣೆ ಕೇಳಿ ಬಂದಿತ್ತು ಆದರೆ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಮೇಲಿನ ಪರೀಕ್ಷೆ ಒತ್ತಡ ಕಡಿಮೆಯಾಗಿದೆ.
ತಜ್ಞರ ಸಲಹೆ ಮೇರೆಗೆ ಈ ನಿರ್ಧಾರ ಜಾರಿ ಗೊಳಿಸಲಾಗಿದೆ ಎಂದರು.ಇನ್ನೂ ಪಿಯುಸಿಯಲ್ಲಿ ಶೇಕಡ 6ರಷ್ಟು ಫಲಿತಾಂಶ ಹೆಚ್ಚಳವಾಗಿದೆ.ಶಿಕ್ಷಣ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ.ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿ ದ್ದಾರೆ.
ಏಪ್ರಿಲ್ ಕೊನೆಯ ವಾರ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..