ಬೆಂಗಳೂರು –
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ Lkg ತರಗತಿಗಳನ್ನು ಆರಂಭ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಒಂದು ಮಾಹಿತಿ ಯನ್ನು ನೀಡಿದರು
ಇನ್ನೂ ರಾಜ್ಯದಲ್ಲಿ ಹೊಸದಾಗಿ ಮುಂದಿನ ಮೂರು ವರ್ಷಗಳಲ್ಲಿ 3,000 ಶಾಲೆ ತೆರೆಯು ತ್ತೇವೆ ಕೆಪಿಎಸ್ ಶಾಲೆಗಳ ಬಗ್ಗೆ ನಮ್ಮ ಸರ್ಕಾರ ಬದ್ಧತೆ ಹೊಂದಿದೆ. ನೂರು ಶಾಲೆಗಳನ್ನು ಇಡೀ ರಾಜ್ಯದ್ಯಂತ ತೆರೆಯುತ್ತೇವೆ.
ಮುಂದಿನ ಮೂರು ವರ್ಷಗಳಲ್ಲಿ 3000 ಶಾಲೆ ತೆರೆಯುತ್ತೇವೆ ಎಂದರು. ಶೈಕ್ಷಣಿಕ ವರ್ಷದಿಂದ ಮುಂದಿನ ಮೂರು ವರ್ಷದೊಳಗೆ ಮೂರು ಸಾವಿರ ಕೆಪಿಎಸ್ ಶಾಲೆಗಳು ಆರಂಭವಾಗಲಿವೆ. ಕೆಪಿಎಸ್ ಶಾಲೆಗಳಿಗೆ ತುಂಬಾ ಬೇಡಿಕೆ ಇದೆ ಎಂದರು.
LKG ಸೇರುವ ಮಕ್ಕಳಿಗೆ ನಾಲ್ಕು ವರ್ಷ ಪೂರ್ಣವಾಗಬೇಕು ಆದೇಶವನ್ನು ನಾವು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..