- ಬೀದರ್ – ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಅಗತ್ಯವಿದ್ದು, ನೈತಿಕ ಶಿಕ್ಷಣದಲ್ಲಿ ಮಕ್ಕಳಿಗೆ ಬಸವಣ್ಣ ಸೇರಿ ಇತರೆ ಶರಣರ ವಚನಗಳನ್ನು ಬೋಧನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು ಔರಾದ್ ನಗರದ ಅಮರೇಶ್ವರ ಕಾಲೇಜಿನ ಆವರಣದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಭಗವದ್ಗೀತೆ ಪಠಣದಂತೆ ಮಹಾತ್ಮ ಬಸವಣ್ಣ ಸೇರಿ ಇತರೆ ಶರಣರ ವಚನಗಳನ್ನು ಆಧರಿಸಿಯೂ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು ಇನ್ನು ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಂತಿಮ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು. ಒಂದೂವರೆ ತಿಂಗಳಲ್ಲಿ ಪರಿಶೀಲನೆ ಪ್ರಕ್ರಿಯೆ ಮುಗಿಸಿ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು
Suddi Sante > Education News > ಶಾಲೆಗಳಲ್ಲಿ ಹೊಸದೊಂದು ಪರಿಚಯಿಸಲು ಮುಂದಾದ ಶಿಕ್ಷಣ ಸಚಿವರು
ಶಾಲೆಗಳಲ್ಲಿ ಹೊಸದೊಂದು ಪರಿಚಯಿಸಲು ಮುಂದಾದ ಶಿಕ್ಷಣ ಸಚಿವರು
Suddi Sante Desk27/09/2022
posted on