ಬೆಂಗಳೂರು –
ಅದ್ಯಾಕೊ ಏನೋ ಶಿಕ್ಷಕರ ವರ್ಗಾವಣೆ ದಿನದಿಂದ ದಿನಕ್ಕೆ ತುಂಬಾ ತುಂಬಾ ಸಮಸ್ಯೆಯಾಗುತ್ತಿದೆ. ಈಗಾಗಲೇ ಹೇಳಿದಂತೆ ಯಾವ ಇಲಾಖೆಗೂ ಇಲ್ಲದ ಯಾರಿಗೂ ಇಲ್ಲದ ವರ್ಗಾವಣೆ ಯ ನೀತಿ ನಿಯಮ ಗಳು ಈ ಒಂದು ಶಿಕ್ಷಣ ಇಲಾಖೆಗೆ ಅದರಲ್ಲೂ ಶಿಕ್ಷಕರಿಗೆ ಇವೆ.ಈವರೆಗೆ ಏನೆಲ್ಲಾ ಬದಲಾವಣೆ ಆದರೂ ಬದಲಾದರು ಕೂಡಾ ವರ್ಗಾವಣೆ ನೀತಿ ನಿಯಮಗಳು ಮಾತ್ರ ಬದಲಾಗುತ್ತಿಲ್ಲ ಗಂಡ ಒಂದು ಕಡೆಗೆ ಹೆಂಡತಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆ ಪೋಷಕರು ಮತ್ತೊಂದು ಕಡೆ ಹೀಗೆ ದಿಕ್ಕಿಗೊಬ್ಬರು ಇದ್ದುಕೊಂಡು ಸಧ್ಯ ಕಷ್ಟದ ಪರಿಸ್ಥಿತಿಯಲ್ಲಿ ನಾಡಿನ ಅದೆಷ್ಟೋ ಶಿಕ್ಷಕ ಬಂಧು ಗಳು ಕೆಲಸ ಮಾಡತಾ ಇದ್ದಾರೆ.
ಹೀಗಿರುವಾಗ ಈ ಒಂದು ವರ್ಗಾವಣೆ ವಿಚಾರದಲ್ಲಿ ರಾಜ್ಯದಲ್ಲಿ ಇಲಾಖೆಗೆ ನೂತನವಾಗಿ ಬಂದಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಆಗಸ್ಟ್ 15 ರಂದು ಯಾದಗಿರಿ ಗೆ ಬರತಾ ಇದ್ದಾರೆ. ಈಗಾಗಲೇ ಅವರನ್ನು ಭೇಟಿಯಾಗಿ ಶಿಕ್ಷಕರಿಗೆ ಬಹುದೊಡ್ಡ ಸಮಸ್ಯೆಯಾಗಿರುವ ವರ್ಗಾವಣೆ ಕುರಿತು ಮಾತ ನಾಡಲು ನಿರ್ಧಾರವನ್ನು ಶಿಕ್ಷಕರು ತೆಗೆದುಕೊಂಡಿ ದ್ದಾರೆ.
ಹೌದು ಆಗಸ್ಟ್ 15 ರಂದು ಮಾನ್ಯ ಶಿಕ್ಷಣ ಸಚಿವರು ಧ್ವಜಾರೋಹಣ ಹಿನ್ನೆಲೆಯಲ್ಲಿ ಆಗಸ್ಟ್ 14 ರಂದು ಯಾದಗಿರಿ ಗೆ ಬಂದು ವಾಸ್ತವ್ಯವನ್ನು ಮಾಡಲಿದ್ದು ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವರ್ಗಾವಣೆ ಯ ನಿರೀಕ್ಷೆ ಯ ಹೋರಾಟದ ಮುಂದಾಳತ್ವ ವಹಿಸಿಕೊಂಡಿರುವ ಶಿಕ್ಷಕ ನಾಯಕರು ಕರೆ ನೀಡಿದ್ದಾರೆ ಹೌದು ಇದು ಯಾರ ಯಾವುದೇ ಕಾರ್ಯಕ್ರಮ ಅಲ್ಲ ಇದೊಂದು ಎಲ್ಲರಿಗೂ ಅವಶ್ಯಕ ವಾಗಿರುವ ಬೇಡಿಕೆ ಇನ್ನೂ ಮತ್ತ್ಯಾಕೆ ತಡ ನೀವು ಬನ್ನಿ ನಿಮ್ಮವರನ್ನು ಕರೆದುಕೊಂಡು ಬನ್ನಿ