ಹಾಸನ –
ಪಠ್ಯಪುಸ್ತಕ ವಿವಾದ ಕುರಿತಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಾಹಿತಿಗಳ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಹಾಸನದಲ್ಲಿ ಮಾತನಾಡಿದ ಅವರು ಪಠ್ಯದಲ್ಲಿ ತಮ್ಮ ಪದ್ಯ ಪ್ರಕಟಿಸದಂತೆ ಸಾಹಿತಿಗಳ ಪತ್ರ ವಿಚಾರ ಕುರಿತಂತೆ ಸಾಹಿತಿಗಳ ವಿರುದ್ಧ ಅಸಮಾಧಾನ ವನ್ನು ವ್ಯಕ್ತಪಡಿಸಿದರು.

ಇದೊಂದು ಮುಗಿದು ಹೋಗಿರುವ ಕಥೆಯಾಗಿದೆ ಪಠ್ಯದಲ್ಲಿ ಇಲ್ಲದೆ ಇರುವ ಕವಿಗಳೆಲ್ಲ ಹೇಳಿದ್ರು ಅವರ ಪದ್ಯನೇ ಇಲ್ಲಾ ಇನ್ನು ತೆಗೆಯೋದು ಎಲ್ಲಿಂದ.ದೇವನೂರು ಮಹದೇವ ಅವರು ಹಿರಿಯ ಸಾಹಿತಿ,ಒಬ್ಬ ಹೋರಾಟಗಾರ ಪಠ್ಯ ಪರಿಷ್ಕರಣೆ ಮಾಡುವಾಗ ಹೇಳಿದ್ರೆ ಸ್ವಾಗತ ಮಾಡುತ್ತಿದ್ದೆವು ಅವತ್ತು ರೋಹಿತ್ ಚಕ್ರತೀರ್ಥ ಅವರನ್ನೇ ಮಾಡಿದ್ದು ಅಂತ ಗೊತ್ತಿತ್ತು ಬುಕ್ ಪ್ರಿಂಟ್ ಆಗಿ,ಕೊಟ್ಮೇಲೆ ತೆಗಿರಿ ಅಂತ ಹೇಳುದ್ರೆ ಹೇಗೆ ಮಾಡದೋ ಅನ್ನೋದು ಗೊತ್ತಿಲ್ಲ ಅವರ ಪಾಠ ಇರಬೇಕು ಅಂತ ಆಸೆ ಇದೆ ಅವರು ಒತ್ತಾಯ ಮಾಡುತ್ತಲೆ ಇದ್ದರೆ ಸರ್ಕಾರ ನಿರ್ಣಯ ತೆಗೆದುಕೊಳ್ಳುತ್ತೆ ಎಂದರು.ಇನ್ನೂ ಅವರಿಂದ ಪತ್ರ ಬಂದ ಕೂಡಲೇ ನಿಮ್ಮ ಪದ್ಯ ಚೆನ್ನಾಗಿದೆ ಇರಬೇಕು ಎನ್ನುವ ಆಸೆ ಇದೆ ಅಂತ ಹೇಳಿದ್ದೆವು ಅವರ ಪತ್ರಕ್ಕೆ ನಾನು ಬರೆದ ಉತ್ತರ ದೇವ ನೂರು ಮಹಾದೇವ ಅವರಿಗೆ ಹೋಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಅಕಸ್ಮಾತ್ ಪತ್ರ ಹೋದ ಮೇಲೂ ಅವರು ಮತ್ತೆ ಪತ್ರ ಬರುದ್ರೆ ಅವರ ಬಗ್ಗೆ ನನಗಿರುವ ಹೆಚ್ಚಿನ
ಗೌರವದ ಬಗ್ಗೆ ನಾನು ಯೋಚನೆ ಮಾಡುತ್ತೇನೆ ಅವರು ನನಗೆ ಪತ್ರ ಬರೆದಿರುವುದು ನಾನು ಬರೆದ ಪತ್ರ ಅವರಿಗೆ ರೀಚ್ ಆಗಿರುವ ಬಗ್ಗೆ ನನ್ನ ಬಳಿ ದಾಖಲೆ ಇದೆ ಅವರು ಪತ್ರ ತಲುಪಿಲ್ಲ ಅಂತ ಹೇಳಲಿ ನಾನು ಉತ್ತರ ಕೊಡುತ್ತೀನಿ ಆದರೆ ತೆಗಿರಿ ಅಂತ ಹೇಳುವ ಲೀಗಲ್ ರೈಟ್ಸ್ ಯಾರಿಗೂ ಇಲ್ಲ.ಎಲ್ಲದಕ್ಕೂ ಒಂದು ಮಿತಿ ಅಂತ ಇದೆ ಇದೇನು ಹೊಸ ದಲ್ಲ ಮೋದಿಯವರು ಪ್ರಧಾನಮಂತ್ರಿ ಆದ ಕೂಡಲೇ ಎಡಪಂಥೀಯರು ಒಂದಿಷ್ಟು ಸಾಹಿತಿಗಳು ಇದೇ ಕೆಲಸ ಮಾಡಿದ್ರು ಪ್ರಶಸ್ತಿ ವಾಪಾಸ್ ಕೊಟ್ಟು ಬಿಡ್ತಿವಿ ಅಂದ್ರು, ಯಾರು ಕೊಟ್ರೋ, ಯಾರು ಬಿಟ್ರೋ, ಯಾರು ತಗೊಂ ಡೋಗಿ ಇಟ್ರೋ ಒಂದು ಗೊತ್ತಿಲ್ಲ ಇಂತಹದ್ದೆಲ್ಲ ನಡೆಯು ತ್ತಲೇ ಇರುತ್ತೆ ಸಾಹಿತಿಗಳ ಬಗ್ಗೆ ನನಗೆ ಇರುವ ಹೆಚ್ಚಿನ ಗೌರವವರಿಂದ ಹೇಳುತ್ತೇನೆ.ನನಗೆ ಇಬ್ಬರು ಸಾಹಿತಿ ಬಿಟ್ಟರೆ ಯಾರೂ ಪತ್ರ ಬರೆದಿಲ್ಲ ಒಟ್ಟು 14 ಜನ ಸಾಹಿತಿಗಳು ಹೇಳಿದ್ರು ಅದರಲ್ಲಿ ಎಂಟು ಜನದ್ದು ಇಲ್ಲವೇ ಇಲ್ಲ ಎನ್ನುತ್ತಾ ಎಲ್ಲಾ ಗೊಂದಲಗಳಿಗೆ ತೆರೆ ಏಳೆದರು.