ಬೆಂಗಳೂರು –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಬೆಂಗಳೂರಿನ ಹಲವು ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹೌದು ಎರಡು ಕಾರಣದಿಂದಾಗಿ ಪರಿಶೀಲನೆ ನಡೆಸಲು ಬಂದಿದ್ದು ವ್ಯಾಕ್ಸಿನೇಷನ್ ಹೇಗೆ ನಡೆಯುತ್ತಿದೆ ಹಾಗೂ ಹೆಚ್ಚಿನ ಮಕ್ಕಳು ಇರುವುದರಿಂದ ಕೊರೊನಾ ರೂಲ್ಸ್ ಹೇಗೆ ಫಾಲೋ ಆಗ್ತಿದೆ ಎಂಬುದನ್ನು ನೋಡೋಕೆ ಭೇಟಿ ನೀಡಿದೆ ಹೈಸ್ಕೂಲ್ ನಲ್ಲಿ ಹಾಜರಾತಿ ಇಲ್ಲ.ಪಿಯುಸಿ ನಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಇದ್ದಾರೆ.ಎಲ್ಲಾ ವ್ಯವಸ್ಥೆ ಇದ್ರೂ ವಿಜ್ಞಾನ ವಿಭಾಗಕ್ಕೆ ಯಾಕೆ ಮಕ್ಕಳು ಸರ್ಕಾರಿ ಶಾಲೆಗೆ ಬರ್ತಾ ಇಲ್ಲ.ನಾವು ಪ್ರಚಾರ ಮಾಡೋದ್ರಲ್ಲಿ ಹಿಂದೆ ಇದ್ದೀವಾ ಅಥವಾ ಖಾಸಗಿ ಶಾಲೆಯ ಮಟ್ಟಕ್ಕೆ ನಮ್ಮಲ್ಲಿ ವಾತಾವರಣ ಇಲ್ವಾ ಅನ್ನೋದು ಗೊತ್ತಿಲ್ಲ.ಮುಂದಿನ ದಿನಗಳಲ್ಲಿ ವಿಜ್ಞಾನ ವಿಭಾಗಕ್ಕೆ ಓದುವ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಲಾಗುತ್ತೆ.ಈ ಬಗ್ಗೆ ಶಾಲೆಯ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದರು.

ಮಕ್ಕಳು ಎಲ್ಲಿ ಇರ್ತಾರೋ ಅಲ್ಲಿ ಉಪನ್ಯಾಸಕರು ಇರಲ್ಲ ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತೆ.ಕೆಲವು ಕಡೆ ಉಪನ್ಯಾಸಕರು ಇರ್ತಾರೆ ಮಕ್ಕಳು ಇರಲ್ಲ.ಖಾಸಗಿ ಶಾಲೆಯ ರೀತಿಯಲ್ಲಿ ನಮ್ಮ ಕಟ್ಟಡಗಳನ್ನು ಅಭಿವೃದ್ಧಿಪಡಿ ಸಬೇಕು.ಕಟ್ಟಡ ನೋಡಿ, ಶಾಲೆಗೆ ಬರುವ ರೀತಿ ನಮ್ಮಲ್ಲಿ ಇಲ್ಲ.ಹೀಗಾಗಿ ಸ್ವಲ್ಪ ಮಟ್ಟಿಗಿನ ಕಟ್ಟಡ ಅಭಿವೃದ್ಧಿ ಮಾಡೋದು ಇದೆ ಎಂದು ಸಚಿವರು ಹೇಳಿದರು.