ಕುಮಟಾ –
ಶಿಕ್ಷಕರ ಕೆಲವೊಂದಿಷ್ಟು ಸಮಸ್ಯೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಕುಮಟಾ ದಲ್ಲಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕ ಸಂಘದಿಂದ ಮನವಿ ನೀಡಲಾಯಿತು. ಹೌದು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ ರವರಿಗೆ ಕುಮಟಾ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದಿಂದ ಮನವಿ ನೀಡಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಬಲ ಪುನರ್ ವರ್ಗೀಕರಣ ಹಾಗೂ ವೃಂದ ಮತ್ತು ನೇಮಕಾತಿ ನಿಯಮ ಗಳಿಗೆ ಸೂಕ್ತ ತಿದ್ದುಪಡಿ ತಂದು ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸೇವಾ ಜೇಷ್ಠತೆ ಹಾಗೂ ಬಿ.ಎ, ಬಿಎಸ್ ಸಿ, ಎಂ.ಎ, ಬಿ.ಇಡಿ ಪದವಿ ಹೊಂದಿರುವ ಶಿಕ್ಷಕರಿಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯ ವನ್ನು ಮಾಡಿದರು.
ಶಾಸಕ ದಿನಕರ ಶೆಟ್ಟಿ ಯವರ ಸಮ್ಮುಖ ದಲ್ಲಿ ಕುಮಟಾ ತಾಲೂಕು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಶಿಕ್ಷಕ ಡಾ.ಶ್ರೀಧರ ಗೌಡ ಮನವಿ ಸಲ್ಲಿಸಿದರು. ಇನ್ನೂ ಇದೇ ವೇಳೆ ಮನವಿ ಸ್ವೀಕರಿಸಿದ ಸಚಿವರು ಈಗಾಗಲೇ ಈ ಸಮಸ್ಯೆ ಕುರಿತು ಚರ್ಚೆ ನಡೆದಿದ್ದು ಖಂಡಿತವಾಗಿಯೂ ಮೂಲ ಶಿಕ್ಷಕರಿಗೆ ತೊಂದರೆಯಾಗಿರು ವುದು ಕಂಡುಬಂದಿದೆ.
ಅತಿ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶಿಕ್ಷಕ ಮಂಜುನಾಥ.ಎಂ.ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.