ಬೆಂಗಳೂರು –
ಪತಿ ಒಂದು ಕಡೆ ಪತ್ನಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ಪೋಷಕರು ಮತ್ತೊಂದು ಕಡೆಗೆ ಊರು ಇನ್ನೊಂದು ಕಡೆಗೆ ಹೀಗೆ ದಿಕ್ಕಾಪಾಲಾಗಿ ವರ್ಗಾವಣೆ ಸಿಗದೇ ಕರ್ತವ್ಯವನ್ನು ಮಾಡುತ್ತಿರುವ ನಾಡಿನ ಶಿಕ್ಷಕರಿಗೆ ಶಿಕ್ಷಣ ಸಚಿವ ಬಿ ಸಿ ನಾಗೇಸ್ ಅಭಯ ನೀಡಿದ್ದಾರೆ.ಸಧ್ಯ ಶಿಕ್ಷಕರ ವರ್ಗಾವಣೆಗೆ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿದೆ.ಹೀಗಾಗಿ ಇದನ್ನು ತೆರುವುಗೊಳಿಸಿ ವರ್ಗಾವಣೆಯ ವಿಚಾರದಲ್ಲಿ ಕೂಡಲೇ ಹೊಸದೊಂದು ಆದೇಶವನ್ನು ಮಾಡಿ ಸಧ್ಯ ವರ್ಗಾವಣೆ ಸಿಗದೇ ಬೇಸತ್ತಿರುವ ಶಿಕ್ಷಕರಿಗೆ ಅವರು ಕೇಳಿದ ಸ್ಥಳದಲ್ಲೇ ಅನುಕೂಲ ಮಾಡಿಕೊಟ್ಟು ವರ್ಗಾವಣೆಗೆ ಮಾಡೊದಾಗಿ ಸಚಿವರು ಹೇಳಿದರು.
ಶಿರಸಿಯಿಂದ ಶಿಕ್ಷಕಿಯೊಬ್ಬರು ಕೇಳಿದ ಈ ಒಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ವರ್ಗಾವಣೆ ಸಿಗದೇ ಕಂಗಾಲಾಗಿ ರುವ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ತುಸು ನೆಮ್ಮದಿಯ ಸುದ್ದಿಯನ್ನು ಸಚಿವರು ನೀಡಿದರು.ಸುವರ್ಣ ನ್ಯೂಸ್ ನ ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ಈ ಒಂದು ಕಾರ್ಯಕ್ರಮಕ್ಕೆ ಶಿಕ್ಷಕಿಯೊಬ್ಬರು ಮಾತಾನಾಡಿ ವರ್ಗಾವಣೆಯ ವಿಚಾರ ಕುರಿತಂತೆ ಕೇಳಿದರು ಇದಕ್ಕೆ ಸಚಿವರು ಕೂಡಲೇ ವರ್ಗಾವಣೆ ತಿದ್ದುಪಡಿ ಮಾಡಿ ಸಮಸ್ಯೆ ಪರಿಹರಿಸೊದಾಗಿ ಹೇಳಿದರು